Wednesday, May 8, 2024
Homeಕರಾವಳಿಬೆಳ್ತಂಗಡಿ : ಚುನಾವಣಾಧಿಕಾರಿಗಳಿಂದ ಪತ್ರಿಕಾಗೋಷ್ಠಿ

ಬೆಳ್ತಂಗಡಿ : ಚುನಾವಣಾಧಿಕಾರಿಗಳಿಂದ ಪತ್ರಿಕಾಗೋಷ್ಠಿ

spot_img
- Advertisement -
- Advertisement -

ಬೆಳ್ತಂಗಡಿ : ಚುನಾವಣಾ ಪೂರ್ವ ತಯಾರಿ ಹಿನ್ನಲೆಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ-200 ರ ಚುನಾವಣಾಧಿಕಾರಿಗಳು ತಾಲೂಕು ಆಡಳಿತ ಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಒಟ್ಟು ಮತದಾರರು 222144 ಮಂದಿ ಇದರಲ್ಲಿ ಗಂಡು 110634 , ಹೆಣ್ಣು 111510 ಮಂದಿ ಇದ್ದಾರೆ.ಒಟ್ಟು 241 ಮತದಾನ ಕೇಂದ್ರಗಳು ,ಒಟ್ಟು 143 ಮತಗಟ್ಟೆ ಸ್ಥಳಗಳು, ಒಟ್ಟು 241 ಬಿ.ಎಲ್.ಓಗಳು. 3 ವಿಡಿಯೋ ಚಿತ್ರೀಕರಣ ಸಿಬ್ಬಂದಿ, 3 ವಿಡಿಯೋ ಕಣ್ಗಾವಲು ಸಿಬ್ಬಂದಿ, ಕೊಕ್ಕಡ ,ಚಾರ್ಮಾಡಿ, ನಾರವಿಯಲ್ಲಿ 3 ಚೆಕ್ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಎರಡು ಶಿಫ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದೂರು ಕಣ್ಗಾವಲು ಕಂಟ್ರೋಲ್ ಕೊಠಡಿ ಮತ್ತು ಕರೆ ಕೇಂದ್ರ 3 ಮಾಡಲಾಗಿದೆ‌‌. ಒಟ್ಟು 3 ಫೇಯಿಂಗ್ ಸ್ವ್ಯಾಡ್  ನೇಮಿಸಲಾಗಿದೆ.

 ಚುನಾವಣಾ ಪೂರ್ವ ತಯಾರಿ ವೇಳೆ ಅಕ್ರಮವಾಗಿ ಶೇಖರಿಸಿಟ್ಟ ಒಟ್ಟು 11 ಲೀಟರ್ ಅಬಕಾರಿ ಇಲಾಖೆ ವಶಪಡಿಸಿಕೊಂಡಿದೆ.  ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ 2 ಕೋಟಿ ಡಿಸಿಸಿ ಬ್ಯಾಂಕ್ ವಾಹನ ಸಿಕ್ಕಿದ್ದು ಈ ವೇಳೆ ಸೂಕ್ತ ದಾಖಲೆ ನೀಡಿದ ಬಳಿಕ ವಾಪಸ್ ನೀಡಲಾಗಿದೆ. ನಾರವಿ ತಪಾಸಣೆ ವೇಳೆ 1.5 ಲಕ್ಷ ಹಣ ಸಿಕ್ಕಿದು ದಾಖಲೆ ತಂದು ಕೊಟ್ಟ ಬಳಿಕ ವಾಪಸ್ ನೀಡಲಾಗಿದೆ. ಅಕ್ರಮಗಳ ಬಗ್ಗೆ ಮಾಹಿತಿ ನೀಡದರೆ ತಕ್ಷಣ ನಮ್ಮ ತಂಡ ಸ್ಥಳಕ್ಕೆ ಹೋಗಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಚುನಾವಣಾಧಿಕಾರಿ ಯೋಗೀಶ್ ಮಾಹಿತಿ ನೀಡಿದರು.

ಚುನಾವಣಾಧಿಕಾರಿ ಯೋಗೀಶ್  , ಉಪಚುನಾವಣಾಧಿಕಾರಿ ಸುರೇಶ್ ಕುಮಾರ್ , ಎಮ್.ಸಿ.ಸಿ ಅಧಿಕಾರಿ ಕುಸುಮಧರ್, ಸೆಕ್ಟರ್ ಅಧಿಕಾರಿ ನಟರಾಜ್ , ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು.

- Advertisement -
spot_img

Latest News

error: Content is protected !!