Thursday, June 4, 2026
Homeಕರಾವಳಿಬೆಳ್ತಂಗಡಿಗೆ ಆಗಮಿಸಿದ ಚುನಾವಣಾ ಪರಿವೀಕ್ಷಕರು:ತಾಲೂಕಿನ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ

ಬೆಳ್ತಂಗಡಿಗೆ ಆಗಮಿಸಿದ ಚುನಾವಣಾ ಪರಿವೀಕ್ಷಕರು:ತಾಲೂಕಿನ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ

- Advertisement -
- Advertisement -

ಬೆಳ್ತಂಗಡಿ : ಚುನಾವಣಾ ನಿಂತಿ ಸಂಹಿತೆ ಜಾರಿಯಲ್ಲಿರುವ ವೇಳೆ ಚುನಾವಣಾ ಖರ್ಚು ವೆಚ್ಚಗಳ ಪರಿವೀಕ್ಷಕರು ಬೆಳ್ತಂಗಡಿ ತಾಲೂಕಿನ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ನಂತರ ಬೆಳ್ತಂಗಡಿ ಆಡಳಿತ ಸೌಧದ ಚುನಾವಣಾ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಬೆಳ್ತಂಗಡಿ ತಾಲೂಕು ಮತ್ತು ಮೂಡಬಿದ್ರೆ ತಾಲೂಕಿಗೆ ನೇಮಕವಾಗಿರುವ ಚುನಾವಣಾ ಖರ್ಚು ವೆಚ್ಚಗಳ ಪರಿವೀಕ್ಷಕರಾದ ಐಎಎಸ್ ಅಧಿಕಾರಿ ಸುನಿಲ್ ಕುಮಾರ್ ಯಾದವ್ ಎ.13 ರಂದು ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ, ಕೊಕ್ಕಡ , ನಾರವಿ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ,ಚುನಾವಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು , ಸಿ.ಆರ್.ಪಿ.ಎಫ್ ಪಡೆಗಳ ಜೊತೆ ಮಾತುಕತೆ ನಡೆಸಿ ಕರ್ತವ್ಯದ ಬಗ್ಗೆ ಮಾಹಿತಿ ನೀಡಿದರು.

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿರುವ ಚುನಾವಣಾ ಕಚೇರಿಗೆ ಭೇಟಿ ನೀಡಿ ಚುನಾವಣಾ ಕರ್ತವ್ಯದಲ್ಲಿರುವ ವಿವಿಧ ತಂಡಗಳ ಜೊತೆ ಚುನಾವಣೆಯ ಪೂರ್ವ ತಯಾರಿ ಬಗ್ಗೆ ಸಭೆ ನಡೆಸಿದರು. ಚುನಾವಣಾ ಖರ್ಚು ವೆಚ್ಚಗಳ ಪರಿವೀಕ್ಷಕ ಐಎಎಸ್ ಅಧಿಕಾರಿ ಸುನಿಲ್ ಕುಮಾರ್ ಯಾದವ್ ಜೊತೆಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಸುರೇಶ್ ಕುಮಾರ್ ಬೆಳ್ತಂಗಡಿಗೆ ಭೇಟಿ ವೇಳೆ ಜೊತೆಯಲ್ಲಿದ್ದರು.

- Advertisement -

Latest News

error: Content is protected !!