Thursday, July 16, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಹಾವು ಕಚ್ಚಿ ವೃದ್ಧರೊಬ್ಬರು ಸಾವು

ಬೆಳ್ತಂಗಡಿ: ಹಾವು ಕಚ್ಚಿ ವೃದ್ಧರೊಬ್ಬರು ಸಾವು

- Advertisement -
- Advertisement -

ಬೆಳ್ತಂಗಡಿ: ಹಾವು ಕಚ್ಚಿ ವೃದ್ಧರೊಬ್ಬರು ಸಾವನ್ನಪ್ಪಿರುವ ಘಟನೆ ಕಲ್ಮಂಜ ಗ್ರಾಮದ ಪೆಲತ್ತೊಟ್ಟದ ಕಮ್ಮಾರನ ಬಳಿ ನಡೆದಿದೆ. ನಡ ಗ್ರಾಮದ ಪೆರ್ಮಾಣುವಿನ ನೂಚಿಲ ನಿವಾಸಿ ತಿಮೋತಿ ಪಿಂಟೊ (82) ಮೃತ ದುರ್ದೈವಿ.

ಅ. 27ರಂದು ದ ಕತ್ತಿಯನ್ನು ದುರಸ್ತಿಗಾಗಿ ಪೆಲತ್ತೊಟ್ಟಿನ ದಿನೇಶ ಆಚಾರ್ಯ ಅವರ ಬಳಿಗೆ ಕೊಂಡೊಯ್ದಿದ್ದರು. ಅಲ್ಲಿ ಅವರು ಕಬ್ಬಿಣದ ವಸ್ತುಗಳನ್ನು ತೆಗೆದು ನೋಡುತ್ತಿದ್ದಾಗ ಎಡ ಕೈಯ ಬೆರಳಿಗೆ ವಿಷದ ಹಾವೊಂದು ಕಡಿದಿತ್ತು. ತಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!