Friday, May 3, 2024
HomeWorldಜಪಾನ್ ನಲ್ಲಿ ಭಾರಿ ಭೂಕಂಪ, ಸುನಾಮಿಯ ಎಚ್ಚರಿಕೆ !

ಜಪಾನ್ ನಲ್ಲಿ ಭಾರಿ ಭೂಕಂಪ, ಸುನಾಮಿಯ ಎಚ್ಚರಿಕೆ !

spot_img
- Advertisement -
- Advertisement -

ಟೊಕಿಯೋ: ಜಪಾನ್‌ನಲ್ಲಿ ಪ್ರಬಲವಾದ ಭೂಕಂಪನವಾಗಿದೆ . ಫುಕುಶಿಮಾ ಕರಾವಳಿಯಲ್ಲಿ 7.4 ತೀವ್ರತೆಯಲ್ಲಿ ಭೂಕಂಪನವಾಗಿದೆ. 2011ರ ಬಳಿಕ ಜಪಾನ್​​ನಲ್ಲಿ ಈ ರೀತಿಯ ಭಾರಿ ಭೂಕಂಪ ಸಂಭವಿಸಿದೆ.

ಇದರ ಪರಿಣಾಮವಾಗಿ ಬುಲೆಟ್ ರೈಲು ಹಳಿತಪ್ಪಿತು , ಹೆದ್ದಾರಿಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದೆ. ಫುಕುಶಿಮಾ ಸಮುದ್ರ ತೀರದಲ್ಲಿ ಸಣ್ಣ ಪ್ರಮಾಣದ ಸುನಾಮಿ ಎದ್ದಿರುವುದಾಗಿ ವರದಿ ವಿವರಿಸಿದೆ. ಜಪಾನ್‌ನಲ್ಲಿ ಭೀಕರ ಸುನಾಮಿ ಅಪ್ಪಳಿಸುವ ಎಚ್ಚರಿಕೆ ಈಗಾಗಲೇ ನೀಡಲಾಗಿದೆ .

ಭೂಕಂಪದಲ್ಲಿ ಇದುವರೆಗೆ 4 ಜನರು ಸಾವನ್ನಪ್ಪಿದ್ದು 100 ಜನರು ಗಾಯಗೊಂಡಿದ್ದಾರೆ. ಫುಕುಶಿಮಾ ಪ್ರದೇಶದ ಕರಾವಳಿಯಾಚೆ 60 ಕಿಲೋ ಮೀಟರ್ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿರುವುದಾಗಿ ಭೂಗರ್ಭಶಾಸ್ತ್ರ ಇಲಾಖೆ ತಿಳಿಸಿದೆ .

ಪ್ರಬಲ ಭೂಕಂಪದ ಪರಿಣಾಮ 20 ಲಕ್ಷಕ್ಕೂ ಅಧಿಕ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ .

- Advertisement -
spot_img

Latest News

error: Content is protected !!