Sunday, May 19, 2024
Homeತಾಜಾ ಸುದ್ದಿಶಾಲಾ-ಕಾಲೇಜು ಆರಂಭಕ್ಕೆ ಮುಹೂರ್ತ ಫಿಕ್ಸ್ - ಜನವರಿ 1ರಿಂದ ಶಾಲಾ-ಕಾಲೇಜು ಆರಂಭ!..

ಶಾಲಾ-ಕಾಲೇಜು ಆರಂಭಕ್ಕೆ ಮುಹೂರ್ತ ಫಿಕ್ಸ್ – ಜನವರಿ 1ರಿಂದ ಶಾಲಾ-ಕಾಲೇಜು ಆರಂಭ!..

spot_img
- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಕಾಲೇಜುಗಳ ಆರಂಭ ಯಾವಾಗ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ದೊರೆತಿದೆ. ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಪುನರಾರಂಭ ಜನವರಿ 1ರಿಂದ ಆರಂಭವಾಗಲಿದೆ. 10ನೇ ತರಗತಿ ಹಾಗೂ 12ನೇ ತರಗತಿ ಆರಂಭಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದಂತ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿರುವುದಾಗಿ ಘೋಷಿಸಲಾಗಿದೆ.

ಮಾಹಿತಿಯನ್ನು ಸಿಎಂ ಯಡಿಯೂರಪ್ಪ ಅವರು ಟ್ವಿಟ್ ಮೂಲಕ ಹಂಚಿಕೊಂಡಿದ್ದಾರೆ. 2021ರ ಜನವರಿ 1 ರಿಂದ, 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿ ಹಾಗೂ 6 ರಿಂದ 9ನೇ ತರಗತಿಗೆ ವಿದ್ಯಾಗಮ ಪ್ರಾರಂಭ ಮಾಡಲಾಗುತ್ತಿದೆ. ಹದಿನೈದು ದಿನಗಳ ಕಾಲ ಪರಿಸ್ಥಿತಿ ಅವಲೋಕಿಸಿ ಇತರ ತರಗತಿ ಪ್ರಾರಂಭಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದ ಎಂಬುದಾಗಿ ತೀರ್ಮಾನ ಕೈಗೊಳ್ಳಲಾಗಿದೆ.

- Advertisement -
spot_img

Latest News

error: Content is protected !!