Saturday, June 6, 2026
Homeತಾಜಾ ಸುದ್ದಿಮಾಜಿ ಸಂಸದ ಶಿವಸೇನಾ ಮುಖಂಡ ಮೋಹನ ರಾವಲೆ (72) ಇನ್ನಿಲ್ಲ!..

ಮಾಜಿ ಸಂಸದ ಶಿವಸೇನಾ ಮುಖಂಡ ಮೋಹನ ರಾವಲೆ (72) ಇನ್ನಿಲ್ಲ!..

- Advertisement -
- Advertisement -

ಮುಂಬೈ: ಶಿವಸೇನಾ ಮುಖಂಡ ಹಾಗೂ ಐದು ಬಾರಿ ಸಂಸದರಾಗಿದ್ದ ಮೋಹನ ರಾವಲೆ (72) ಅವರು ಇಂದು ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಿವಸೇನಾ ಮುಖಂಡ ಸಂಜಯ್‌ ರಾವತ್‌ ಇವರ ಸಾವಿಗೆ ಸಂತಾಪ ಸೂಚಿಸಿದ್ದು ‘ಮೋಹನ ರಾವಲೆ ಅವರು ನಿಧನರಾದರು. ಅವರು ನಿಜವಾದ ಶಿವಸೈನಿಕ ಹಾಗೂ ವಿಶಾಲ ಹೃದಯದ ಸ್ನೇಹಿತರಾಗಿದ್ದರು’ ಎಂದು ಟ್ವೀಟ್‌ ಮಾಡಿದ್ದಾರೆ.

ಮೋಹನ ರಾವಲೆ ದಕ್ಷಿಣ ಮಧ್ಯ ಮುಂಬೈ ಲೋಕಸಭಾ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿದ್ದರು. 2013ರಲ್ಲಿ ಶಿವಸೇನೆಯನ್ನು ಕೆಲ ಭಿನ್ನಾಭಿಪ್ರಾಯಗಳ ಕಾರಣ ತೊರೆದಿದ್ದು ಬಳಿಕ ಮತ್ತೆ ಶಿವಸೇನೆಯಲ್ಲಿ ಸಕ್ರಿಯರಾಗಿದ್ದರು.ಇವರ ಸಾವಿಗೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

- Advertisement -

Latest News

error: Content is protected !!