Wednesday, June 24, 2026
Homeಅಪರಾಧಮೆಜೆಸ್ಟಿಕ್ ನಲ್ಲಿ ಬೆಳ್ಳಂಬೆಳಗ್ಗೆ  ಭೀಕರ ದುರಂತ; ಪ್ರಯಾಣಿಕನ ತಲೆಯ ಮೇಲೆ ಹರಿದ ಆಂಧ್ರ ಬಸ್! 

ಮೆಜೆಸ್ಟಿಕ್ ನಲ್ಲಿ ಬೆಳ್ಳಂಬೆಳಗ್ಗೆ  ಭೀಕರ ದುರಂತ; ಪ್ರಯಾಣಿಕನ ತಲೆಯ ಮೇಲೆ ಹರಿದ ಆಂಧ್ರ ಬಸ್! 

- Advertisement -
- Advertisement -

ಬೆಂಗಳೂರು : ಮೆಜೆಸ್ಟಿಕ್ ನಲ್ಲಿ ಬೆಳ್ಳಂಬೆಳಗ್ಗೆ ಭೀಕರ ದುರಂತವೊಂದು ಸಂಭವಿಸಿದ್ದು, ಆಂಧ್ರಪ್ರದೇಶದ ಸಾರಿಗೆ ಸಂಸ್ಥೆ ಬಸ್‌ ಹರಿದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಬೆಂಗಳೂರಿನ ಮೆಜೆಸ್ಟಿಕ್ ಟರ್ಮಿನಲ್‌ ಮೂರರಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟವನನ್ನು ಬೆಳಗಾವಿ ಜಿಲ್ಲೆಯ ಭೂಷಣ್ ಎಂದು ಹೇಳಲಾಗಿದೆ. 

ಭೂಷಣ್‌ ಆಂಧ್ರ ಸಾರಿಗೆ ಸಂಸ್ಥೆಯ ಬಸ್ ಗೆ ಒರಗಿಕೊಂಡು ನಿಂತಿದ್ದು, ಬಸ್ ಚಾಲಕ ಇದನ್ನು ಗಮನಿಸಿದೆ ಬಸ್ ಚಾಲನೆ ಮಾಡಿ ಮುಂದಕ್ಕೆ ಚಲಿಸಿದ್ದಾನೆ. ಈ ವೇಳೆಯಲ್ಲಿ ಭೂಷಣ್ ಕೆಳಗೆ ಬಿದಿದ್ದು, ಭೂಷಣ್ ತಲೆಯ ಮೇಲೆ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನೆಯ ಬಗ್ಗೆ ಚಾಮರಾಜಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

- Advertisement -

Latest News

error: Content is protected !!