Friday, June 5, 2026
Homeಕರಾವಳಿಬೆಳ್ತಂಗಡಿ ಮೈದಾನದಲ್ಲಿ ಪೌರಕಾರ್ಮಿಕನ ಶವ‌ ಕೊಳೆತ ಸ್ಥಿತಿಯಲ್ಲಿ ಪತ್ತೆ.

ಬೆಳ್ತಂಗಡಿ ಮೈದಾನದಲ್ಲಿ ಪೌರಕಾರ್ಮಿಕನ ಶವ‌ ಕೊಳೆತ ಸ್ಥಿತಿಯಲ್ಲಿ ಪತ್ತೆ.

- Advertisement -
- Advertisement -

ಬೆಳ್ತಂಗಡಿ : ಪೌರಕಾರ್ಮಿಕನ‌ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾದ ಘಟನೆ ಬೆಳ್ತಂಗಡಿ ನಗರದ ಮಾರಿಗುಡಿ‌ ದೇವಸ್ಥಾನದ ಪಕ್ಕದಲ್ಲಿರುವ ಸರಕಾರಿ ಮೈದಾನದಲ್ಲಿ ನಡೆದಿದೆ‌.

ಮೃತ ಪೌರಕಾರ್ಮಿಕರನ್ನು ಬೆಳ್ತಂಗಡಿಯ ನಿಂಗಶೆಟ್ಟಿ(43) ಎಂದು ಗುರುತಿಸಲಾಗಿದೆ

ಬೆಳ್ತಂಗಡಿ ಸರಕಾರಿ ಮೈದಾನದಲ್ಲಿ ಕೊಳೆತ ಸ್ಥಿತಿಯಲ್ಲಿ ನಿಂಗ ಶೆಟ್ಟಿಯವರ ಮೃತದೇಹ ಶುಕ್ರವಾರ ಸಂಜೆ ಪತ್ತೆಯಾಗಿದ್ದು ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಬೆಳ್ತಂಗಡಿ ಸರಕಾರಿ ಶವಾಗಾರಕ್ಕೆ ಸಾಗಿಸಲಾಗಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.ಶವಪತ್ತೆಯಾದ ಜಾಗದಲ್ಲಿ ಬಟ್ಟೆ,ಹಣ,ಗುರುತಿನ ಚೀಟಿ, ಚಪ್ಪಲ್,ಶೂ ಪತ್ತೆಯಾಗಿದೆ.

ಮೈಸೂರು ಜಿಲ್ಲೆಯ ಕೆ.ಆರ್‌ನಗರದ ನಿವಾಸಿಯಾದ ನಿಂಗಶೆಟ್ಟಿ, ಮೂರು ತಿಂಗಳಿನಿಂದ ಕೆಲಸಕ್ಕೆ ನಿಂಗಶೆಟ್ಟಿ ಗೈರಾಗಿದ್ದರು. ಕೆಲ ತಿಂಗಳ ಹಿಂದೆ ಯುವತಿಯೊಬ್ಬಳೊಂದಿಗಿನ ಪ್ರೀತಿ ವಿಚಾರ ಮನೆಯವರಿಗೆ ಗೊತ್ತಾಗಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿ ಮನೆಗೆ ವಾಪಸಾಗಿದ್ದರು. ಬೆಳ್ತಂಗಡಿ ಠಾಣೆಯಲ್ಲಿ ಪ್ರೀತಿ ವಿಚಾರ ರಾಜಿ ಪಂಚಾಯಿತಿ ಮಾಡಲಾಗಿತ್ತು. ನಿಂಗಶೆಟ್ಟಿಗೆ ಮದುವೆಯಾಗಿ ಒಂದು ಹೆಣ್ಣು ,ಇಬ್ಬರು ಗಂಡು ಮಕ್ಕಳಿದ್ದಾರೆ.ಪತ್ನಿ ಹಾಗೂ ಮಕ್ಕಳ ಜೊತೆ ಬೆಳ್ತಂಗಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

- Advertisement -

Latest News

error: Content is protected !!