Wednesday, June 24, 2026
Homeಆರಾಧನಾಮಾಣಿಯಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ದಸರಾ ಕ್ರೀಡಾಕೂಟ

ಮಾಣಿಯಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ದಸರಾ ಕ್ರೀಡಾಕೂಟ

- Advertisement -
- Advertisement -

ಬಂಟ್ವಾಳ: ಶ್ರೀ ಶಾರದಾ ಯುವ ವೇದಿಕೆ ಸೇವಾ ಟ್ರಸ್ಟ್ (ರಿ.) ಮಾಣಿ ವತಿಯಿಂದ ನವರಾತ್ರಿ ಮಹೋತ್ಸವದ ಅಂಗವಾಗಿ ದಸರಾ ಕ್ರೀಡಾಕೂಟ ಕಾರ್ಯಕ್ರಮವನ್ನು ಅಕ್ಟೋಬರ್ 21, 2025ರಂದು ಗಾಂಧಿ ಮೈದಾನ, ಮಾಣಿಯಲ್ಲಿ ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಕಬಡ್ಡಿ ಪಂದ್ಯಾಟ ಹಾಗೂ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ 9.00 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮಾಣಿಯ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಸಚ್ಚಿನ್ ರೈ ಮಾಣಿಗುತ್ತು ಅವರು ಉದ್ಘಾಟಿಸಲಿದ್ದಾರೆ. ಶ್ರೀ ಗಂಗಾಧರ ರೈ ತುಂಗೆರೆಕೋಡಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ಉಪಸ್ಥಿತರಿರುವರು.

ಮಧ್ಯಾಹ್ನ1 ಗಂಟೆಗೆ ಹಿರಿಯರ ಕಬಡ್ಡಿ ಪಂದ್ಯಾಟ ಆರಂಭವಾಗಲಿದೆ. ತಂಡವನ್ನ ಸ್ಥಳದಲ್ಲೇ ರಚಿಸಲಾಗುವುದು. ಅಂಪೈರ್‌ ಮತ್ತು ಸಂಘಟಕರ ತೀರ್ಮಾನವೇ ಅಂತಿಮ. ಪುರುಷರ ಹಗ್ಗ ಜಗ್ಗಾಟಕ್ಕೆ 7 ಜನರ ತಂಡವನ್ನು ತಾವೇ ರಚಿಸಿ ತರತಕ್ಕದು. 4 ಗಂಟೆಗೆ ಹಗ್ಗ ಜಗ್ಗಾಟ ಸ್ಪರ್ಧೆ ಆರಂಭ. ಮಧ್ಯಾಹ್ನ 2 ಗಂಟೆಗೆ ಮಹಿಳೆಯರಿಗೆ ಆಟೋಟ ಸ್ಪರ್ಧೆ ಆರಂಭವಾಗಲಿದೆ.

ಆಟೋಟ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನವನ್ನು ಕೊಡಲಾಗುತ್ತದೆ.

ಕಾರ್ಯಕ್ರಮದ ಕುರಿತ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9663157839 ಅನ್ನು ಸಂಪರ್ಕಿಸಬಹುದು.

- Advertisement -

Latest News

error: Content is protected !!