Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ; ಸವಣಾಲು ಗ್ರಾಮದ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರ, ಕಾಳಿಬೆಟ್ಟದಲ್ಲಿ ದಿ:30/01/2026 ದಿಂದ ದಿ:01/02/2026 ರವರೆಗೆ ವಾರ್ಷಿಕ...

ಬೆಳ್ತಂಗಡಿ; ಸವಣಾಲು ಗ್ರಾಮದ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರ, ಕಾಳಿಬೆಟ್ಟದಲ್ಲಿ ದಿ:30/01/2026 ದಿಂದ ದಿ:01/02/2026 ರವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ

- Advertisement -
- Advertisement -

ಬೆಳ್ತಂಗಡಿ; ಸವಣಾಲು ಗ್ರಾಮದ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರ, ಕಾಳಿಬೆಟ್ಟದಲ್ಲಿ  ಇದೇ ಬರುವ ದಿ:30/01/2026, ಶುಕ್ರವಾರದಿಂದ ಪ್ರಾರಂಭವಾಗಿ ದಿ:01/02/2026,  ಭಾನುವಾರದವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ ಜರಗಲಿದೆ. ವೈದಿಕ ಕಾರ್ಯಕ್ರಮಗಳು ವಿಧಿವತ್ತಾಗಿ ಜರಗಲಿರುವುದು ಹಾಗೂ ಅನ್ನಸಂತರ್ಪಣೆ ಕೂಡ ಜರಗಲಿರುವುದು. ಆ ಪ್ರಯುಕ್ತ ತಾವೆಲ್ಲರೂ ಶ್ರೀ ಕ್ಷೇತ್ರಕ್ಕೆ ಆಗಮಿಸಿ, ಶ್ರೀ ದೇವಿಯ ದರ್ಶನಗೈದು, ಪ್ರಸಾದವನ್ನು ಸ್ವೀಕರಿಸಿ, ಶ್ರೀ ದುರ್ಗಾಕಾಳಿಕಾಂಬ ದೇವಿಯ ದಿವ್ಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ  ಅಪೇಕ್ಷಿಸುತ್ತೇವೆ ಎಂದು ಕ್ಷೇತ್ರದ ಆಡಳಿತ ಮಂಡಳಿ ತಿಳಿಸಿದೆ.

ಜಾತ್ರಾ ಮಹೋತ್ಸವದ ವಿಶೇಷ ಸೇವೆಗಳು

ವಿಶೇಷ ಅನ್ನದಾನ ಸೇವೆ (ಜಾತ್ರೋತ್ಸವದ 3 ದಿನ) – 30,000/-

ಮಹಾ ಅನ್ನದಾನ ಸೇವೆ – 10,000/-

ಅನ್ನದಾನ ಸೇವೆ – 5,000/-

ಒಂದು ದಿನದ ಪೂಜೆ – 1,500/-

ಅಲಂಕಾರ ಸೇವೆ (1,000/-ದಿಂದ)

ರಂಗಪೂಜೆ – 1,000/-

ಸಾಂಸ್ಕೃತಿಕ ಕಾರ್ಯಕ್ರಮ

31/01/2026, ಶನಿವಾರ

ಸಂಜೆ 06:00 ಗಂಟೆ ಯಿಂದ

ಅಂಗನವಾಡಿ ಕೇಂದ್ರ, ಗುತ್ತಿನ ಬೈಲು ಮತ್ತು ನಡ್ತಿಕಲ್ಲು ಹಾಗೂ ಊರವರಿಂದ – ಸಾಂಸ್ಕೃತಿಕ ಕಾರ್ಯಕ್ರಮ

ರಾತ್ರಿ 07:00 ಗಂಟೆಯಿಂದ

ಹೆಜ್ಜೆನಾದ ತಂಡ, ಮಂಗಳೂರು, ಇವರಿಂದ

ಗಾನ-ನೃತ್ಯ-ವೈಭವ

ನಿರ್ದೇಶನ: ಕು||ಜ್ಞಾನ ಐತಾಳ್

ಭಕ್ತ ಜನರ ಅವಗಾಹನೆಗೆ,

i)ದಿ 30/01/2026, ಶುಕ್ರವಾರ ದಂದು ಬೆಳಗ್ಗೆ 09:00 ಗಂ.ಯಿಂದ ಹಸಿರುವಾಣಿ ಹೊರೆಕಾಣಿಕೆ ಯನ್ನು ಸ್ವೀಕರಿಸಲಾಗುವುದು.

ii) ಕಾಳಿ ಗುಡಿಯಲ್ಲಿ ಹೂವಿನ ಪೂಜೆ – 30/01/2026ರಂದು ಜರಗಲಿದೆ

  iii) ಹೆಚ್ಚಿನ ವಿವರಗಳಿಗೆ ಶ್ರೀ ಕ್ಷೇತ್ರದ ಕಛೇರಿಯನ್ನು ಸಂಪರ್ಕಿಸುವುದು.

- Advertisement -

Latest News

error: Content is protected !!