Wednesday, June 24, 2026
Homeತಾಜಾ ಸುದ್ದಿ‘ಕಾಂತಾರ – ಚಾಪ್ಟರ್ 1’ ಚಿತ್ರದ ಡಬ್ಬಿಂಗ್‍ ಮತ್ತು ವಿತರಣೆ ಹಕ್ಕುಗಳು ಸೋಲ್ಡ್ ಔಟ್‍!

‘ಕಾಂತಾರ – ಚಾಪ್ಟರ್ 1’ ಚಿತ್ರದ ಡಬ್ಬಿಂಗ್‍ ಮತ್ತು ವಿತರಣೆ ಹಕ್ಕುಗಳು ಸೋಲ್ಡ್ ಔಟ್‍!

- Advertisement -
- Advertisement -

‘ಕಾಂತಾರ – ಚಾಪ್ಟರ್ 1’ ಚಿತ್ರವು ಅಕ್ಟೋಬರ್‍ 02ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ಈ ಚಿತ್ರವು ಬೇರೆ ಭಾಷೆಗಳ ಮತ್ತು ರಾಜ್ಯ ವಿತರಣೆ ಮತ್ತು ಹಕ್ಕುಗಳಿಗೆ ಭಾರೀ ಬೇಡಿಕೆಯಿದ್ದು, ಈಗಾಗಲೇ ಕೆಲವು ಭಾಷೆಗಳ ಹಕ್ಕುಗಳು ಮಾರಾಟವಾಗಿದೆ ಎಂದು ತಿಳಿದು ಬಂದಿದೆ.

ಕಳೆದ ತಿಂಗಳಷ್ಟೇ ‘ಕಾಂತಾರ – ಚಾಪ್ಟರ್‍ 1’ ಚಿತ್ರದ ತೆಲುಗು ಡಬ್ಬಿಂಗ್‍ ಮತ್ತು ಆಂಧ್ರ ಪ್ರದೇಶ ಮತ್ತು ತೆಲಂಗಾಣದ ವಿತರಣೆ ಹಕ್ಕುಗಳು ಬರೋಬ್ಬರಿ 100 ಕೋಟಿ ರೂ.ಗಳಿಗೆ ಮಾರಾಟವಾಗಿದೆ.  ಇನ್ನು, ಈ ಚಿತ್ರದ ಹಿಂದಿಯ ಡಬ್ಬಿಂಗ್ ಮತ್ತು ಉತ್ತರಭಾರತ ಮತ್ತು ನೇಪಾಳದ ವಿತರಣೆ ಹಕ್ಕುಗಳನ್ನು AA Films ಸಂಸ್ಥೆಯು ತನ್ನದಾಗಿಸಿಕೊಂಡಿದೆ. ಬಾಲಿವುಡ್‍ನ ಖ್ಯಾತ ನಟಿ ರವೀನಾ ಟಂಡನ್‍ ಅವರ ಪತ್ನಿ ಅನಿಲ್‍ ಥಡಾನಿ ಒಡೆತನದ AA Films ಸಂಸ್ಥೆಯು ಇದಕ್ಕೂ ಮೊದಲು ‘ಕೆಜಿಎಫ್‍’, ‘ಕಾಂತಾರ’ ಸೇರಿದಂತೆ ಕೆಲವು ಚಿತ್ರಗಳ ವಿತರಣೆ ಮತ್ತು ಡಬ್ಬಿಂಗ್‍ ಹಕ್ಕುಗಳನ್ನು ತನ್ನದಾಗಿಸಿಕೊಂಡು, ಉತ್ತರ ಭಾರತದಲ್ಲಿ ದೊಡ್ಡ ಮಟ್ಟಿಗೆ ಬಿಡುಗಡೆ ಮಾಡಿದೆ. ಈಗ ಆ ಸಾಲಿಗೆ ‘ಕಾಂತಾರ – ಚಾಪ್ಟರ್ 1’ ಸಹ ಸೇರಿದೆ. ಚಿತ್ರದ ಓವರ್ಸೀಸ್‍ ಹಕ್ಕುಗಳನ್ನು PHF ಸಂಸ್ಥೆಯು ಪಡೆದುಕೊಂಡಿದ್ದು, ಅದರಲ್ಲಿ ಇಂಗ್ಲೆಂಡ್‍ ಭಾಗದಲ್ಲಿ ಲಾಫಿಂಗ್‍ ವಾಟರ್‍ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ಬಿಡುಗಡೆ ಮಾಡುತ್ತಿದೆ. 

‘ಕಾಂತಾರ ಚಾಪ್ಟರ್ 1’ ಚಿತ್ರವನ್ನು ಹೊಂಬಾಳೆ ಫಿಲಂಸ್‍ ನಿರ್ಮಿಸಿದ್ದು, ರಿಷಭ್‍ ಶೆಟ್ಟಿ ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ರುಕ್ಮಿಣಿ ವಸಂತ್‍, ಅಚ್ಯುತ್‍ ಕುಮಾರ್‍, ಗುಲ್ಶನ್‍ ದೇವಯ್ಯ ಮುಂತಾದವರು ನಟಿಸಿದ್ದು, ಚಿತ್ರವು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆದೆ.

- Advertisement -

Latest News

error: Content is protected !!