Friday, June 26, 2026
Homeತಾಜಾ ಸುದ್ದಿಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ:ಕನ್ನಡದ ಖ್ಯಾತ ನಿರ್ಮಾಪಕನ ಬಂಧನ

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ:ಕನ್ನಡದ ಖ್ಯಾತ ನಿರ್ಮಾಪಕನ ಬಂಧನ

- Advertisement -
- Advertisement -

ಬೆಂಗಳೂರು : ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ನ ಕೆಂಪೇಗೌಡ ಸಿನಿಮಾ ನಿರ್ಮಾಪಕ ‘ಶಂಕರ್ ಗೌಡ’ ರನ್ನು ಪೊಲೀಸರು ಬಂಧಿಸಿದ್ದಾರೆ.ಗೋವಿಂದಪುರ ಡ್ರಗ್ ಕೇಸಿನಲ್ಲಿ ನಿರ್ಮಾಪಕ ಶಂಕರ್ ಗೌಡನನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಾರ್ಚ್ 7 ರಂದು ಶಂಕರ್ ಗೌಡ ಕಚೇರಿ ಮೇಲೆ ಪೊಲೀಸರು ಧಿಡೀರ್ ದಾಳಿ ನಡೆಸಿ ಮಹತ್ವದ ದಾಖಲೆ ವಶಕ್ಕೆ ಪಡೆದುಕೊಂಡಿದ್ದರು, ಡಾಲರ್ಸ್ ಕಾಲೋನಿ 3 ನೇ ಮುಖ್ಯ ರಸ್ತೆಯಲ್ಲಿರುವ 4 ಅಂತಸ್ತಿನ ಕಟ್ಟಡದಲ್ಲಿರುವ ಕಛೇರಿ ಮೇಲೆ ಗೋವಿಂದಪುರ ಠಾಣೆ ಪೊಲೀಸರು ದಾಳಿ ನಡೆಸಿದ್ದರು.

ಇದರ ಜೊತೆಗೆ ವಿದೇಶಿ ಡ್ರಗ್ ಪೆಡ್ಲರ್ ಜೊತೆ ನಂಟು ಹೊಂದಿದ ಆರೋಪ ಕೂಡ ಇವರ ಮೇಲಿದ್ದು, ಗೋವಿಂದಪುರ ಠಾಣೆಯ ಇನ್ ಸ್ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆದಿತ್ತು, ಇದೀಗ ನಿರ್ಮಾಪಕ ಶಂಕರ್ ಗೌಡನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೊಳಪಡಿಸಲಿದ್ದಾರೆ

- Advertisement -

Latest News

error: Content is protected !!