Saturday, May 18, 2024
Homeಕರಾವಳಿಉಡುಪಿಹೆಬ್ರಿ: ನಿಯಂತ್ರಣ ತಪ್ಪಿದ ಕಾರೊಂದು ಮನೆಗೆ ಹಿಮ್ಮುಖವಾಗಿ ನುಗ್ಗಿ ಚಾಲಕ ಸಾವು !

ಹೆಬ್ರಿ: ನಿಯಂತ್ರಣ ತಪ್ಪಿದ ಕಾರೊಂದು ಮನೆಗೆ ಹಿಮ್ಮುಖವಾಗಿ ನುಗ್ಗಿ ಚಾಲಕ ಸಾವು !

spot_img
- Advertisement -
- Advertisement -

ಹೆಬ್ರಿ ಸಮೀಪದ ಗಾಂಧಿನಗರದಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ಮನೆಗೆ ಹಿಮ್ಮುಖವಾಗಿ ನುಗ್ಗಿ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಗಾಂಧಿನಗರ ನಿವಾಸಿ ವಸಂತ ( 52 ) ಮೃತಪಟ್ಟ ಚಾಲಕ.

ವಸಂತ ಅವರು ತನ್ನ ಮನೆಯಿಂದ ಕಾರನ್ನು ರಿವರ್ಸ್ ತೆಗೆಯುವ ಸಂದರ್ಭದಲ್ಲಿ ಎದುರುಗಡೆ ಇರುವ ಮನೆಗೆ ಹಿಮ್ಮುಖವಾಗಿ ಕಾರು ನುಗ್ಗಿ ಮನೆ ಗೋಡೆ ಬಿದ್ದಿದೆ. ಅಪಾರ ಹನಿಯಾಗಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ವಸಂತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ .

ಅಪಾಯವನ್ನರಿತ ಮನೆ ಮನೆಯವರು ಕೂಡಲೇ ಹೊರ ಓಡಿದ ಪರಿಣಾಮ ಮನೆಯಲ್ಲಿದ್ದವರೆಲ್ಲಾ ಅಪಾಯದಿಂದ ಪಾರಾಗಿದ್ದಾರೆ .

ಘಟನಾ ಸ್ಥಳಕ್ಕೆ ಹೆಬ್ರಿ ಠಾಣಾಧಿಕಾರಿ ಮಹೇಶ್ ಟಿ.ಎಂ. ಭೇಟಿ ಪರಿಶೀಲನೆ ನಡೆಸಿದ್ದಾರೆ . ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!