Saturday, June 28, 2025
Homeತಾಜಾ ಸುದ್ದಿಶಿರಡಿ ಸಾಯಿಬಾಬಾ ಮಂದಿರಕ್ಕೆ ತೆರಳೋ ಭಕ್ತರಿಗೆ ಇನ್ಮೇಲೆ ಡ್ರೆಸ್ ಕೋಡ್

ಶಿರಡಿ ಸಾಯಿಬಾಬಾ ಮಂದಿರಕ್ಕೆ ತೆರಳೋ ಭಕ್ತರಿಗೆ ಇನ್ಮೇಲೆ ಡ್ರೆಸ್ ಕೋಡ್

spot_img
- Advertisement -
- Advertisement -

ಮಹಾರಾಷ್ಟ್ರಃ ಶಿರಡಿಯಲ್ಲಿರುವ ಪ್ರಸಿದ್ಧ ಸಾಯಿಬಾಬಾ ಮಂದಿರಕ್ಕೆ ತೆರಳುವ ಭಕ್ತರಿಗೆ ಶ್ರೀ ಸಾಯಿಬಾಬಾ ಟ್ರಸ್ಟ್ ಡ್ರೆಸ್​ಕೋಡ್​ ಕಡ್ಡಾಯ ಅಂತಾ ಮಾಹಿತಿಯನ್ನು ನೀಡಿದೆ.  ಸಾಂಪ್ರದಾಯಿಕ ಉಡುಗೆಗಗಳನ್ನು ಹಾಕಿಕೊಂಡು ದೇಗುಲಕ್ಕೆ ಬರುವಂತೆ ಭಕ್ತರಿಗೆ ಹೇಳಿದೆ.

ದೇಶದ ಅನೇಕ ಪ್ರಸಿದ್ಧ ದೇಗುಲಗಳಿಗೆ ತೆರಳುವ ಭಕ್ತರಿಗೆ ಡ್ರೆಸ್​ ಕೋಡ್​ ನಿಗದಿ ಮಾಡಲಾಗಿದೆ. ಆದರೆ ಶಿರಡಿಗೆ ಆಗಮಿಸುವ ಭಕ್ತರಿಗೆ ಡ್ರೆಸ್​ಕೋಡ್​ ಮನವಿಯೇ ಹೊರತು ಆದೇಶವಲ್ಲ ಅಂತಾ ಶ್ರೀ ಸಾಯಿಬಾಬಾ ಟ್ರಸ್ಟ್​ನ ಕಾರ್ಯನಿರ್ವಾಹಕ ಅಧಿಕಾರಿ ಕನ್ಹುರಾಜ್​​ ಬಾಗಟೆ ಸ್ಪಷ್ಟನೆ ನೀಡಿದ್ದಾರೆ.

ಅಹ್ಮದನಗರ ಜಿಲ್ಲೆಯ ಶಿರಡಿಯಲ್ಲಿರುವ ಪ್ರಸಿದ್ಧ ದೇಗುಲಕ್ಕೆ ಅನೇಕರು ಆಕ್ಷೇಪಾರ್ಹ ಡ್ರೆಸ್​ಗಳನ್ನ ಹಾಕಿ ಬರುತ್ತಾರೆ ಎಂಬ ದೂರು ಕೇಳಿಬಂದ ಹಿನ್ನೆಲೆ ಈ ಮನವಿ ಮಾಡಿದ್ದೇವೆ ಅಂತಾ ಅವರು ಹೇಳಿದ್ದಾರೆ. ನೀವು ಧಾರ್ಮಿಕ ಸ್ಥಳಕ್ಕೆ ಪ್ರವೇಶಿಸುತ್ತಿರುವುದರಿಂದ ಸಾಯಿ ಬಾಬಾ ಭಕ್ತರಾದ ನೀವು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಉಡುಗೆಗಳನ್ನ ತೊಡಬೇಕೆಂದು ಕೋರಲಾಗಿದೆ ಎಂಬ ಪೋಸ್ಟರ್​ಗಳನ್ನ ಮರಾಠಿ ಹಾಗೂ ಇಂಗ್ಲೀಷ್​ ಭಾಷೆಗಳಲ್ಲಿ ಬರೆದು ಅಳವಡಿಸಲಾಗಿದೆ.

- Advertisement -
spot_img

Latest News

error: Content is protected !!