- Advertisement -
- Advertisement -
ಮುಂಬೈ:ಪ್ರಖ್ಯಾತ ಲೈಂಗಿಕ ತಜ್ಞ ಡಾ.ಮಹೀಂದರ್ ವಾತ್ಸಾ (96) ಅವರು ಇಂದು ನಿಧನರಾದರು.ಅವರು ಲೈಂಗಿಕ ಆರೋಗ್ಯ ಕುರಿತಂತೆ ಲೇಖನಗಳನ್ನು ಬರೆಯುತ್ತಿದ್ದು ಪ್ರಸಿದ್ಧರಾಗಿದ್ದರು. ಖ್ಯಾತ ಪತ್ರಿಕೆ ಮುಂಬೈ ಮಿರರ್ ನಲ್ಲಿ ಪ್ರಕಟವಾಗುತ್ತಿದ್ದ ಲೈಂಗಿಕ ಆರೋಗ್ಯ ಕುರಿತಂತೆ ಬರೆಯುತ್ತಿದ್ದ ಅವರ ಬರಹಗಳು “ಆಸ್ಕ್ ದಿ ಎಕ್ಸ್ ಪರ್ಟ್” ಎಂಬ ಅಂಕಣದ ಮೂಲಕ ಹೊರಬರುತ್ತಿತ್ತು. ಡಾ.ವಾತ್ಸಾ 40 ವರ್ಷಗಳಿಂದ ಡಾ.ಸ್ತ್ರೀರೋಗತಜ್ಞ ಮತ್ತು ಪ್ರಸೂತಿ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು.
ಅವರು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಲೈಂಗಿಕ ತಿಳುವಳಿಕ ಹಾಗೂ ಲೈಂಗಿಕ ಶಿಕ್ಷಣಕ್ಕೆ ಆಧ್ಯತೆ ನೀಡುತ್ತಿದ್ದ ಅವರು 1974 ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಲೈಂಗಿಕ ಶಿಕ್ಷಣ ನೀಡುವ, ಸಲಹೆ ಹಾಗೂ ಥೆರೆಪಿ ಕೇಂದ್ರವನ್ನು ಪ್ರಾಂಭಿಸಿದ್ದರು.
- Advertisement -