Friday, June 5, 2026
Homeತಾಜಾ ಸುದ್ದಿಖ್ಯಾತ ಭಾರತೀಯ ಶಾಸ್ತ್ರೀಯ ಸಂಗೀತಕಾರ ನಿಧನ- ಪದ್ಮವಿಭೂಷಣ ಡಾ.ಗುಲಾಂ ಮುಸ್ತಫಾ ಖಾನ್ ಇನ್ನಿಲ್ಲ

ಖ್ಯಾತ ಭಾರತೀಯ ಶಾಸ್ತ್ರೀಯ ಸಂಗೀತಕಾರ ನಿಧನ- ಪದ್ಮವಿಭೂಷಣ ಡಾ.ಗುಲಾಂ ಮುಸ್ತಫಾ ಖಾನ್ ಇನ್ನಿಲ್ಲ

- Advertisement -
- Advertisement -

ಬಾಂದ್ರಾ: ಖ್ಯಾತ ಭಾರತೀಯ ಶಾಸ್ತ್ರೀಯ ಸಂಗೀತಕಾರ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಸಂಗೀತಕಾರ ಡಾ.ಗುಲಾಂ ಮುಸ್ತಫಾ ಖಾನ್(90) ವಯೋಸಹಜ ಅನಾರೋಗ್ಯದಿಂದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಖ್ಯಾತ ಸಂಗೀತಕಾರನ ಸಾವು ಸಂಗೀತಲೋಕಕ್ಕೆ ತುಂಬಲಾರದ ನಷ್ಟವಾಗಿದ್ದು ಅವರು ತಮ್ಮ ಬಾಂದ್ರಾ ನಿವಾಸದಲ್ಲಿ 12.37ಕ್ಕೆ ಕೊನೆಯುಸಿರೆಳೆದಿದ್ದಾರೆ.ಇವರಿಗೆ 1991ರಲ್ಲಿ ಪದ್ಮಶ್ರೀ ಪ್ರಶಸ್ತಿ, ನಂತರ 2006ರಲ್ಲಿ ಪದ್ಮಭೂಷಣ, 2018ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಇವರು ಖ್ಯಾತ ಸಂಗೀತ ನಿರ್ದೇಶಕರಾದ ಉಸ್ತಾದ್ ಮುರ್ರೆದ್ ಬಕ್ಷ್ ಅವರ ಮಗ ತಂದೆಯಿಂದ ಶಾಸ್ತ್ರೀಯ ಸಂಗೀತ ತರಬೇತಿ ಪಡೆದ ಖಾನ್, ನಂತರ ತಮ್ಮ ಸೋದರ ಸಂಬಂಧಿ, ‘ನಿಸಾರ್ ಹುಸೇನ್ ಖಾನ್’ ಅವರ ನೇತೃತ್ವದಲ್ಲಿ ಸಂಗೀತ ಕಲಿತರು.ಇವರ ಸಾವಿನೊಂದಿಗೆ ಸಂಗೀತ ಲೋಕದ ಕೊಂಡಿಯೊಂದು ಕಳಚಿದಂತಾಗಿದೆ.

- Advertisement -

Latest News

error: Content is protected !!