Thursday, April 25, 2024
Homeಕರಾವಳಿಶಸ್ತ್ರಚಿಕಿತ್ಸೆಗೊಳಗಾದ ಯಕ್ಷಗಾನದ ಹಿರಿಯ ಕಲಾವಿದ ಸಂಪಾಜೆ ಶೀನಪ್ಪ ರೈಯವರಿಗೆ ಪಟ್ಲ ಫೌಂಡೇಶನ್ ವತಿಯಿಂದ ಆರ್ಥಿಕ ಸಹಾಯ

ಶಸ್ತ್ರಚಿಕಿತ್ಸೆಗೊಳಗಾದ ಯಕ್ಷಗಾನದ ಹಿರಿಯ ಕಲಾವಿದ ಸಂಪಾಜೆ ಶೀನಪ್ಪ ರೈಯವರಿಗೆ ಪಟ್ಲ ಫೌಂಡೇಶನ್ ವತಿಯಿಂದ ಆರ್ಥಿಕ ಸಹಾಯ

spot_img
- Advertisement -
- Advertisement -

ಸಂಪಾಜೆ : ಸುಮಾರು 55 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತನ್ನ ವಿಭಿನ್ನ ಕಲಾನೈಪುಣ್ಯತೆಯನ್ನು ಮೆರೆಸಿದ ತೆಂಕು ತಿಟ್ಟಿನ ಹೆಸರಾಂತ ಕಲಾವಿದರಾದ ಶ್ರೀ ಸಂಪಾಜೆ ಶೀನಪ್ಪ ರೈಯವರು ಕಾಲಿನ ಗ್ಯಾಂಗ್ರಿನ್ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಈ ಕುರಿತು ಕೇಂದ್ರೀಯ ಸಮಿತಿಯ ಗಮನಕ್ಕೆ ತಂದಾಗ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು ಕೇಂದ್ರೀಯ ಸಮಿತಿಯ ಪದಾಧಿಕಾರಿಗಳೊಂದಿಗೆ ಸಂಪಾಜೆ ಶೀನಪ್ಪ ರೈಯವರ ಮನೆಗೆ ತೆರಳಿ ಮಾನಸಿಕವಾಗಿ ನೊಂದಿರುವ ಅವರಿಗೆ ಧೈರ್ಯದ ಮಾತುಗಳನ್ನಾಡಿ, ಮನಸ್ಸಿಗೆ ಆತ್ಮವಿಶ್ವಾಸವನ್ನು ತುಂಬಿ ಟ್ರಸ್ಟ್ ವತಿಯಿಂದ ರೂ 25000/- ದ ಆರ್ಥಿಕ ಸಹಾಯದೊಂದಿಗೆ ಪೇಟ ತೊಡಿಸಿ, ಶಾಲು ಹೊದಿಸಿ ಫಲವಸ್ತುವನ್ನಿಟ್ಟು ಗೌರವಿಸಿದರು.

ಈ ಸಂದರ್ಭದಲ್ಲಿ ಫೌಂಡೇಶನಿನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಕೋಶಾಧಿಕಾರಿ CA ಸುದೇಶ್ ಕುಮಾರ್ ರೈ , ಹವ್ಯಾಸಿ ಘಟಕದ ಮಧುಕರ್ ಭಾಗವತ್, ಮಂಗಳೂರು ಘಟಕದ ರವಿ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಉಲ್ಲಾಸ್ ಶೆಟ್ಟಿ, ಸುರತ್ಕಲ್ ಘಟಕದ ಮಾಧವ ಎಸ್ ಶೆಟ್ಟಿ ಬಾಳ ಕಾಟಿಪಳ್ಳ ಹಾಗೂ ಮುಂಬಯಿ ಉದ್ಯಮಿ ದಯಾನಂದ ಶೆಟ್ಟಿ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!