Thursday, June 4, 2026
Homeಅಪರಾಧಮಹಿಳೆಗೆ ವರದಕ್ಷಿಣೆಯ ಕಿರುಕುಳ- ಪತಿಯ ವಿರುದ್ಧ ಮಂಗಳೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು

ಮಹಿಳೆಗೆ ವರದಕ್ಷಿಣೆಯ ಕಿರುಕುಳ- ಪತಿಯ ವಿರುದ್ಧ ಮಂಗಳೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಮಂಗಳೂರು: ಮಾನಸಿಕ, ದೈಹಿಕ ಹಿಂಸೆ ನೀಡಿ ಜೀವಬೆದರಿಕೆ ಹಾಗೂ ವರದಕ್ಷಿಣೆ ಕಿರುಕುಳ ಕೊಟ್ಟಿರುವ ಬಗ್ಗೆ ತನ್ನ ಪತಿ ಬಿ.ಸಿ ರೋಡ್ ನ ಮಹಮ್ಮದ್ ಮುಸ್ತಾಫ್ ವಿರುದ್ದ ಆತನ ಪತ್ನಿ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮದುವೆ ಸಮಯದಲ್ಲಿ ಉಡುಗೊರೆಯಾಗಿ ಚಿನ್ನದ ಒಡವೆಗಳನ್ನು ತವರು ಮನೆಯಿಂದ ನೀಡಿದ್ದಾರೆ. ಮದುವೆ ಅನಂತರ ಪತಿ ಮಹಮ್ಮದ್ ಮುಸ್ತಾಫ್ ” ನೀನು 30 ಪವನ್ ಚಿನ್ನ ತಂದಿದ್ದು, ಇನ್ನೂ ಇಪ್ಪತ್ತು ಪವನ್ ಚಿನ್ನವನ್ನು ತವರು ಮನೆಯಿಂದ ತೆಗೆದುಕೊಂಡು ಬಾ ಎಂದು ಕಿರುಕುಳ ನೀಡಲು ಆರಂಭಿಸಿದ್ದಾರೆ. ಅನಂತರ ನಿನಗೆ ಬೇರೆಯವರ ಜತೆ ಅನೈತಿಕ ಸಂಬಂಧವಿದೆ ನೀನು ನನಗೆ ಬೇಡ ನಿನಗೆ ತಲಾಖ್ ಕೊಡುತ್ತೇನೆ ಎಂಬುವುದಾಗಿ ಮಾನಸಿಕ ದೈಹಿಕ ಹಿಂಸೆ ನೀಡಿದ್ದಾನೆ. ಆತ ಉದ್ಯೋಗದ ನಿಮಿತ್ತ ವಿದೇಶಕ್ಕೆ ಹೋಗುವವರೆಗೂ ಕುಲ್ಲು ಎಂಬಾತನ ಜತೆ ಸೇರಿ ಮಾನಸಿಕ ಹಿಂಸೆ ನೀಡಿ ಜೀವಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!