Friday, May 17, 2024
Homeಕರಾವಳಿದೈವಾರಾಧನೆಯ ವಿಡಿಯೋಗಳ ಮೇಲೆ ಎಡಿಟಿಂಗ್ ಪ್ರಯೋಗ ಬೇಡ- ಮಾಣಿಗುತ್ತು ಸಚಿನ್ ರೈ

ದೈವಾರಾಧನೆಯ ವಿಡಿಯೋಗಳ ಮೇಲೆ ಎಡಿಟಿಂಗ್ ಪ್ರಯೋಗ ಬೇಡ- ಮಾಣಿಗುತ್ತು ಸಚಿನ್ ರೈ

spot_img
- Advertisement -
- Advertisement -

ಮಂಗಳೂರು: ಇತ್ತೀಚಿನ ದಿನಗಳಲ್ಲಿ  ಮೊಬೈಲ್ ಗಳಲ್ಲಿ ಲಭ್ಯವಿರುವ ಆ್ಯಪ್ ಗಳ ಮೂಲಕ ದೈವಾರಾಧನೆಗೆ ಸಂಬಂಧಿಸಿದ ಕೆಲವೊಂದು ವಿಡಿಯೋ ತುಣುಕುಗಳನ್ನು ಬೇಕಾಬಿಟ್ಟಿಯಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗುತ್ತಿದೆ. ದೈವಾರಾಧನೆ ಬಗ್ಗೆ ಸರಿಯಾದ ಮಾಹಿತಿ ಇಲ್ಲದವರು ಕೂಡ ಈ ರೀತಿ ಎಡಿಟ್ ಮಾಡಿ ತಮಗೆ ಬೇಕಾದಂತೆ ಶೇರ್ ಮಾಡುತ್ತಿದ್ದಾರೆ. ಈ ರೀತಿ ಮಾಡೋದು ಸರಿಯಲ್ಲ ಎಂದು ಧಾರ್ಮಿಕ ಚಿಂತಕ ಪ್ರತಿಷ್ಠಿತ ಮಾಣಿಗುತ್ತು ಪ್ರಮುಖ ಸಚಿನ್ ರೈ ಹೇಳಿದ್ದಾರೆ.

ದೈವಾರಾಧನೆಗೆ ಸಂಬಂಧಿಸಿದಂತೆ ಯಾವುದೇ ವೀಡಿಯೋ ಎಡಿಟ್ ಮಾಡುವಾಗ ಎಚ್ಚರವಿರಲಿ. ಜನರ ಧಾರ್ಮಿಕ ಭಾವನೆಗಳನ್ನು ಕೆಣಕುವ ದುಸ್ಸಾಹಸ ಬೇಡ. ತಮ್ಮ ಕ್ರಿಯೇಟಿವಿಟಿ ಪ್ರದರ್ಶಿಸಲು ಹೋಗಿ ದೈವಕೋಪಕ್ಕೆ ತುತ್ತಾಗದಂತೆ ಎಚ್ಚರವಹಿಸಿ.  ನಾನು ಈ ರೀತಿ ಹೇಳಿದ್ದಕ್ಕೆ ಯಾರು ಬೇಸರ ಮಾಡಿಕೊಳ್ಳೋದು, ಬೇರೆ ಅರ್ಥ ಕಲ್ಪಿಸೋದು ಬೇಡ.  ಗೊತ್ತಿಲ್ಲದವರಿಗೆ
ಇದು ನನ್ನ ಪ್ರೀತಿಯ ಆತ್ಮೀಯ ಸಲಹೆ. ಅದನ್ನು ಸ್ವೀಕರಿಸುವುದು ಬಿಡುವುದು ನಿಮ್ಮ ಇಷ್ಟ ಎಂದಿದ್ದಾರೆ.


ಮಾಣಿ ಶ್ರೀ ಉಳ್ಳಾಲ್ತಿ ದೈವಸ್ತಾನದ ಆಡಳಿತ ಮೊಕ್ತೇಸರ, ಯುವ ಧಾರ್ಮಿಕ ಚಿಂತಕರಾಗಿರುವ ಇವರು ಮೂಲತಃ ವೃತ್ತಿಯಲ್ಲಿ ಇವರು ಬ್ಯಾಂಕ್ ಮ್ಯಾನೇಜರ್ . ಸಣ್ಣ ವಯಸ್ಸಿನಲ್ಲೇ ದೈವಾರಾಧನೆ ಬಗ್ಗೆ ವಿಶೇಷ ಆಸಕ್ತಿ ಉಳ್ಳವರಾಗಿದ್ದರು. 1999ರಿಂದ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ತಾನದ ಆಡಳಿತ ಮೊಕ್ತೇಸರರಾಗಿ ಧಾರ್ಮಿಕ ಮುಂದಾಳತ್ವ ವಹಿಸಿಕೊಂಡಿದ್ದಾರೆ.ಧಾರ್ಮಿಕ ಕ್ಷೇತ್ರದ ಉತ್ತಮ ಆಡಳಿತಗಾರನಾಗಿ ಎಲ್ಲ ಜನರ ಪ್ರೀತಿ ಪಾತ್ರರಾಗಿದ್ದಾರೆ.ದೈವಾರಾಧನೆಗೆ ಸಂಬಂಧಿಸಿದ ವೀಡಿಯೋ ಗಳನ್ನು ಜನರು ಮೊಬೈಲ್ ನಲ್ಲಿ ಎಡಿಟಿಂಗ್ ಮಾಡುವುದು ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ,ದೈವಸ್ಥಾನಗಳಲ್ಲಿ ಸಾರ್ವಜನಿಕರು ಪೋಟೋ ತೆಗೆಯುವುದು ನಿಷೇಧಿಸಬೇಕು ಎಂದು ಕೆಲವು ವರ್ಷಗಳಿಂದ ಇವರು ವಾದಿಸುತ್ತಾ ಬರುತ್ತಿದ್ದಾರೆ. ಇವರ ಈ ನಿಲುವಿಗೆ ಸಾರ್ವಜನಿಕರಿಂದಲೂ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.

- Advertisement -
spot_img

Latest News

error: Content is protected !!