- Advertisement -
![]()
- Advertisement -
ಬಂಟ್ವಾಳ: ಮಾಣಿ ಗ್ರಾಮದ ಕೊಡಾಜೆ-ಗಡಿಸ್ಥಳದಲ್ಲಿ ವರ್ಷಂಪ್ರತಿ ನಡೆಯುವ ದೊಂಪದ ಬಲಿ ನೇಮವು ಇದೇ ಬರುವ ತಾ.12ರಂದು ನಡೆಯಲಿದ್ದು, ಆ ಪ್ರಯುಕ್ತ ಗೊನೆಮುಹೂರ್ತವು ಮಾಣಿಗುತ್ತು ಧರ್ಮಚಾವಡಿಯಲ್ಲಿ ನಡೆಯಿತು.

ತಾ.10ರಿಂದ ಮೂರು ದಿವಸಗಳ ಚೆಂಡು, ತಾ.11ನೇ ಬುಧವಾರ ಸಂಜೆ ಚಪ್ಪರ ಮುಹೂರ್ತ, ತಾ.12ನೇ ಗುರುವಾರ ಬೆಳಿಗ್ಗೆ ಗಂಟೆ 9ರಿಂದ ನಾಗತಂಬಿಲ, ಸಂಜೆ ಗಂಟೆ 6ರಿಂದ ತೋರಣ ಮುಹೂರ್ತ, ಮಾಣಿಗುತ್ತು ಧರ್ಮಚಾವಡಿಯಿಂದ ಭಂಡಾರ ಬರುವುದು, ಅನ್ನಸಂತರ್ಪಣೆ, ರಾತ್ರಿ ಗಂಟೆ 10ರಿಂದ ದೈವಗಳ ನೇಮ, ಮರುದಿನ ಬೆಳಿಗ್ಗೆ ಗಂಟೆ 6ರಿಂದ 1001 ಗಣಗಳ ಗ್ರಾಮ ಸವಾರಿಯ ಸೇವೆ ಮತ್ತು ಭಂಡಾರದ ನಿರ್ಗಮನ ನಡೆಯಲಿದೆ.
ಗೊನೆಮುಹೂರ್ತದ ಸಂದರ್ಭದಲ್ಲಿ ಸಚಿನ್ ರೈ ಮಾಣಿಗುತ್ತು, ಬಾಲಕೃಷ್ಣ ಶೆಟ್ಟಿ ಅಂತರಗುತ್ತು, ನಾರಾಯಣ ಆಳ್ವ ಕೊಡಾಜೆ, ಬಾಲಕೃಷ್ಣ ಆಳ್ವ ಕೊಡಾಜೆ, ರಾಜೀವ್ ಶೆಟ್ಟಿ ವಾರಾಟ ಮತ್ತಿತರರು ಉಪಸ್ಥಿತರಿದ್ದರು.
- Advertisement -


