Friday, June 5, 2026
Homeಕರಾವಳಿಮಂಗಳೂರು_ಚಿರತೆ ಬಾಯಿಯಿಂದ ನಾಯಿ ಎಸ್ಕೇಪ್..!!

ಮಂಗಳೂರು_ಚಿರತೆ ಬಾಯಿಯಿಂದ ನಾಯಿ ಎಸ್ಕೇಪ್..!!

- Advertisement -
- Advertisement -

ಮಂಗಳೂರು_ದಕ್ಷಿಣಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ನಾಯಿಯೊಂದು ಚಿರತೆ ಬಾಯಿಗೆ ಸಿಕ್ಕರೂ ಪ್ರಾಣ ಉಳಿಸಿಕೊಂಡು ಸಾವಿನಿಂದ ಬಚವಾಗಿದೆ. ಚಿರತೆಯ ಬಾಯಿಯಿಂದ ನಾಯಿ ಬಚವಾದ ಸನ್ನಿವೇಶ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪಡುಕೊಣಾಜೆಯ ಸತೀಶ್ ಎಂಬವರ ಮನೆಯ ಬಳಿ ರಾತ್ರಿ ಅಡ್ಡಾಡುತ್ತಿದ್ದ ಚಿರತೆ ಮನೆಯಂಗಳದಲ್ಲಿ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿದೆ. ಆದ್ರೆ ಚಿರತೆ ಕಾಂಪೌಂಡ್ ಹಾರುವಾಗ ಬಾಯಿಯಿಂದ ನಾಯಿ ಜಾರಿ ಬಿದಿದ್ದು ಪ್ರಾಣ ಉಳಿಸಿಕೊಂಡಿದೆ. ಈ ಸಂದರ್ಭ ಬದುಕಿತೆ ಬಡಜೀವವೇ ಎಂದು ನಾಯಿ ಓಟಕಿತ್ತಿದೆ. ಈ ಸನ್ನಿವೇಶವು ಮನೆಯಂಗಳದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

- Advertisement -

Latest News

error: Content is protected !!