Thursday, June 4, 2026
Homeಕರಾವಳಿಪುತ್ತೂರು: ಸವಣೂರಿನಲ್ಲಿ ಹುಚ್ಚು ನಾಯಿ ಕಚ್ಚಿ ಇಬ್ಬರಿಗೆ ಗಾಯ

ಪುತ್ತೂರು: ಸವಣೂರಿನಲ್ಲಿ ಹುಚ್ಚು ನಾಯಿ ಕಚ್ಚಿ ಇಬ್ಬರಿಗೆ ಗಾಯ

- Advertisement -
- Advertisement -

ಪುತ್ತೂರು: ಹುಚ್ಚು ನಾಯಿ ಕಚ್ಚಿ ಇಬ್ಬರು ಗಾಯಗೊಂಡಿರುವ ಘಟನೆ ಕಡಬ ತಾಲೂಕಿನ ಸವಣೂರು ಸಮೀಪದ ಶಾಂತಿನಗರ ಎಂಬಲ್ಲಿ ನಡೆದಿದೆ.

ಶಾಂತಿನಗರದ ಸಮೀರ್ ಹಾಗೂ ಹಸೈನ್ ಎಂಬವರಿಗೆ ಹುಚ್ಚು ನಾಯಿ ಕಡಿದಿದ್ದು ಸ್ಥಳೀಯವಾಗಿ ಎರಡು ಆಡುಗಳಿಗೆ ಹಾಗೂ ಬೆಕ್ಕುಗಳಿಗೆ ಇದೇ ಹುಚ್ಚು ನಾಯಿ ಕಚ್ಚಿದೆ ಎನ್ನಲಾಗಿದೆ.

ಇನ್ನು ಮಗುವಿನ ಮೇಲೆ ನಾಯಿ ದಾಳಿ ಮಾಡಿದ ಸಂದರ್ಭ ಮಗುವನ್ನು ರಕ್ಷಿಸುವ ಸಂದರ್ಭ ಓರ್ವನಿಗೆ ನಾಯಿ ಕಚ್ಚಿ ಗಾಯವಾಗಿರುವುದಾಗಿ ತಿಳಿದು ಬಂದಿದೆ. ಶಾಲೆ, ಮದರಸಗಳಿಗೆ ತೆರಳುವ ಮಕ್ಕಳು ಭಯಭೀತಗೊಂಡಿದ್ದು  ಹುಚ್ಚು ನಾಯಿ ರಂಪಾಟದಿಂದ ಸ್ಥಳೀಯರು ಭಯಭೀತಗೊಂಡಿದ್ದು ಮನೆಯಿಂದ ಹೊರಬರಲೂ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.ಸ್ಥಳೀಯ ಗ್ರಾಮ ಪಂಚಾಯತ್ ಈ ಬಗ್ಗೆ ತುರ್ತು ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!