Friday, March 29, 2024
Homeತಾಜಾ ಸುದ್ದಿಮಹಿಳೆಯೊಬ್ಬರ ಪಿತ್ತಕೋಶದಲ್ಲಿ ಪತ್ತೆಯಾಯ್ತು ಹತ್ತಲ್ಲ ಇಪ್ಪತ್ತಲ್ಲ, ಬರೋಬ್ಬರಿ 1200 ಕ್ಕೂ ಹೆಚ್ಚು ಕಲ್ಲುಗಳು

ಮಹಿಳೆಯೊಬ್ಬರ ಪಿತ್ತಕೋಶದಲ್ಲಿ ಪತ್ತೆಯಾಯ್ತು ಹತ್ತಲ್ಲ ಇಪ್ಪತ್ತಲ್ಲ, ಬರೋಬ್ಬರಿ 1200 ಕ್ಕೂ ಹೆಚ್ಚು ಕಲ್ಲುಗಳು

spot_img
- Advertisement -
- Advertisement -
ಚೆನ್ನೈ: ಮಹಿಳೆಯೊಬ್ಬರ ಪಿತ್ತಕೋಶದಿಂದ ಕಲ್ಲುಗಳನ್ನು ತೆಗೆದು ತೆಗೆದೂ ವೈದ್ಯರೇ ಸುಸ್ತಾಗಿ ಹೋಗಿದ್ದಾರೆ. ಅಂತಹ ಅಪರೂಪದ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ. ಮಹಿಳೆಯೊಬ್ಬರ ಪಿತ್ತಕೋಶದಿಂದ  ಬರೋಬ್ಬರಿ 1,200 ಕ್ಕೂ ಹೆಚ್ಚು ಕಲ್ಲುಗಳನ್ನು ಹೊರ ತೆಗೆದಿದ್ದಾರೆ. 55 ವರ್ಷದ ಮಹಿಳೆಯೊಬ್ಬರು ತೀವ್ರ ಹೊಟ್ಟೆ ನೋವು, ಹಸಿವಾಗದಿರುವುದು, ಜಠರದುರಿತ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಯಿಂದ ಚೆನ್ನೈನಲ್ಲಿರುವ ಮೋಹನ್ ಡಯಾಬಿಟಿಸ್ ಕ್ಲಿನಿಕ್‌ಗೆ ಭೇಟಿ ನೀಡಿದ್ದರು. ಅಲ್ಲಿ ಆಕೆಯನ್ನು ಸ್ಕ್ಯಾನ್‌ ಮಾಡಿದಾಗ, ಆಕೆಯ ಪಿತ್ತಕೋಶದಲ್ಲಿ ಐವತ್ತಕ್ಕೂ ಹೆಚ್ಚು ಕಲ್ಲುಗಳಿರುವುದು ಗೊತ್ತಾಗಿದೆ. ನಂತರ, ವೈದ್ಯರ ತಂಡವು ತಕ್ಷಣವೇ ಆಕೆಗೆ ಶಸ್ತ್ರಚಿಕಿತ್ಸೆ ಮೂಲಕ ಮೂತ್ರಕೋಶದಲ್ಲಿದ್ದ ಕಲ್ಲುಗಳನ್ನು ತೆಗೆದುಹಾಕಲು ನಿರ್ಧರಿಸಿದೆ. ಅದರಂತೆ ಕಲ್ಲುಗಳನ್ನು ತೆಗೆಯಲು ಆರಂಭಿಸಿದಾಗ ಸ್ವತಃ ವೈದ್ಯರೇ ಶಾಕ್ ಆಗಿದ್ದಾರೆ.ಬರೋಬ್ಬರಿ 1200 ಕಲ್ಲುಗಳು ಪತ್ತೆಯಾಗಿವೆ. ವೈದ್ಯರ ಪ್ರಕಾರ, ಅವುಗಳಲ್ಲಿ 2 ಎಂಎಂಗಿಂತ ದೊಡ್ಡದಾದ 1,240 ಕಲ್ಲುಗಳು ಮತ್ತು ಇತರವು ಚಿಕ್ಕದಾಗಿವೆ.ನನ್ನ 20 ವರ್ಷಗಳ ಅನುಭವದಲ್ಲಿ ಪಿತ್ತಕೋಶದಲ್ಲಿ ಇಷ್ಟೊಂದು ಪಿತ್ತಗಲ್ಲು ಕಂಡಿರಲಿಲ್ಲಎಂದು ಸಹಾಯಕ ನಿರ್ದೇಶಕ ಹಾಗೂ ಮಧುಮೇಹ ತಜ್ಞ ಬ್ರಿಜೇಂದ್ರ ಕುಮಾರ್ ಶ್ರೀವಾತ್ಸವ್ ಹೇಳಿದ್ದಾರೆ. ಇದಲ್ಲದೆ, 40 ವರ್ಷಕ್ಕಿಂತ ಮೇಲ್ಪಟ್ಟ ಸ್ಥೂಲಕಾಯದ ಮಹಿಳೆಯರಲ್ಲಿ ಪಿತ್ತಗಲ್ಲುಗಳು ಹೆಚ್ಚಾಗಿ ರೂಪುಗೊಳ್ಳುತ್ತವೆ ಮತ್ತು ಮಧುಮೇಹಿಗಳಲ್ಲಿ ರಚನೆಯಾಗುವ ಸಾಧ್ಯತೆ ಹೆಚ್ಚು ಎಂದು ಅವರು ಹೇಳಿದರು. 12 ವರ್ಷಗಳಿಂದ ಈ ರೋಗಿಯನ್ನು ಮಧುಮೇಹ ಬಾಧಿಸುತ್ತಿರುವುದಾಗಿ ಎಂದು ಅವರು ಹೇಳಿದ್ದಾರೆ.

 

- Advertisement -
spot_img

Latest News

error: Content is protected !!