Friday, May 3, 2024
HomeWorldಹಿಂಗೆಲ್ಲಾ ಕಸರತ್ತು ಮಾಡಿ ಕೊರೋನಾ ಲಸಿಕೆ ತೆಗೆದುಕೊಳ್ಳುತ್ತಾರಾ...? ಅಷ್ಟಕ್ಕೂ ಈತ ಮಾಡಿದ್ದೇನು ಗೊತ್ತಾ...?

ಹಿಂಗೆಲ್ಲಾ ಕಸರತ್ತು ಮಾಡಿ ಕೊರೋನಾ ಲಸಿಕೆ ತೆಗೆದುಕೊಳ್ಳುತ್ತಾರಾ…? ಅಷ್ಟಕ್ಕೂ ಈತ ಮಾಡಿದ್ದೇನು ಗೊತ್ತಾ…?

spot_img
- Advertisement -
- Advertisement -

ಬಿಹಾರದ ಗೋಪಾಲಗಂಜ್ ಜಿಲ್ಲೆಯ ಲಸಿಕೆ ಕೇಂದ್ರದ ಕಿಟಕಿಯಿಂದ ಒಬ್ಬ ವ್ಯಕ್ತಿಯು ತನ್ನ ಕೋವಿಡ್ -19 ಲಸಿಕೆ ತೆಗೆದುಕೊಳ್ಳುತ್ತಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಗೋಪಾಲಗಂಜ್ ಜಿಲ್ಲಾ ಕೇಂದ್ರದಿಂದ ಐದು ಕಿಲೋಮೀಟರ್ ದೂರದಲ್ಲಿರುವ ಥಾವೆ ಬ್ಲಾಕ್‌ನಲ್ಲಿರುವ ಸುಕುಲವಾನ್ ಲಸಿಕೆ ಕೇಂದ್ರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಘಟನೆ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಥಾವೆ ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್ ಮನೀಶ್ ಕುಮಾರ್ ತಮಗೂ ಈ ವಿಡಿಯೋ ಸಿಕ್ಕಿದೆ. ‘ನಾವು ಈ ವಿಷಯವನ್ನು ತನಿಖೆ ಮಾಡುತ್ತಿದ್ದೇವೆ. ನಾವು ನಮ್ಮ ತನಿಖೆಯನ್ನು ಪೂರ್ಣಗೊಳಿಸಿದ ನಂತರ, ಆ ವ್ಯಕ್ತಿ ಮತ್ತು ಆತನಿಗೆ ಲಸಿಕೆ ಹಾಕಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಅಂಥ ಹೇಳಿದ್ದಾರೆ.

- Advertisement -
spot_img

Latest News

error: Content is protected !!