Tuesday, May 7, 2024
Homeತಾಜಾ ಸುದ್ದಿಡಿಎಂಡಿಕೆ ಸಂಸ್ಥಾಪಕ, ತಮಿಳು ಸೂಪರ್ ಸ್ಟಾರ್ ‘ಕ್ಯಾಪ್ಟನ್’ ವಿಜಯಕಾಂತ್ ನಿಧನ

ಡಿಎಂಡಿಕೆ ಸಂಸ್ಥಾಪಕ, ತಮಿಳು ಸೂಪರ್ ಸ್ಟಾರ್ ‘ಕ್ಯಾಪ್ಟನ್’ ವಿಜಯಕಾಂತ್ ನಿಧನ

spot_img
- Advertisement -
- Advertisement -

ತಮಿಳು ಚಿತ್ರರಂಗದ ಮೇರು ನಟ ಮತ್ತು ಡಿಎಂಡಿಕೆ(ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಪಕ್ಷ) ಸಂಸ್ಥಾಪಕ ಕ್ಯಾಪ್ಟನ್ ವಿಜಯಕಾಂತ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಗುರವಾರದಂದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 71 ವರ್ಷವಾಗಿತ್ತು. ನ್ಯುಮೋನಿಯಾ ಖಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಚೆನ್ನೈನ MIOT ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯಕೀಯ ತಂಡದ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಅವರು ಡಿಸೆಂಬರ್ 28, 2023 ರಂದು ಬೆಳಿಗ್ಗೆ ನಿಧನರಾದರು ಎಂದು MIOT ಆಸ್ಪತ್ರೆಯು ಹೇಳಿಕೆಯಲ್ಲಿ ತಿಳಿಸಿದೆ.

ವಿಜಯಕಾಂತ್ ತಮ್ಮದೇ ರಾಜಕೀಯ ಪಕ್ಷವನ್ನು ಸ್ಥಾಪಿಸಿ 2006ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ವಿರುಧಾಚಲಂ ಕ್ಷೇತ್ರದಲ್ಲಿ ಗೆದ್ದಿದ್ದರು. ಇದೀಗ ವಿಜಯಕಾಂತ್ ಅವರ ಸಾವು ತಮಿಳುನಾಡಿನ ರಾಜಕೀಯದಲ್ಲಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ತುಂಬಲಾರದ ನಷ್ಟವನ್ನು ತಂದಿದೆ.

- Advertisement -
spot_img

Latest News

error: Content is protected !!