Wednesday, June 3, 2026
Homeತಾಜಾ ಸುದ್ದಿನನಗೂ 60 ವರ್ಷ ಆಯಿತು: ಇನ್ನೆಷ್ಟು ವರ್ಷ ರಾಜಕಾರಣ ‌ಮಾಡಬಹುದು: ರಾಜಕೀಯ ನಿವೃತ್ತಿ ಬಗ್ಗೆ ಡಿಕೆಶಿ...

ನನಗೂ 60 ವರ್ಷ ಆಯಿತು: ಇನ್ನೆಷ್ಟು ವರ್ಷ ರಾಜಕಾರಣ ‌ಮಾಡಬಹುದು: ರಾಜಕೀಯ ನಿವೃತ್ತಿ ಬಗ್ಗೆ ಡಿಕೆಶಿ ಮಾತು

- Advertisement -
- Advertisement -

ರಾಮನಗರ: ಜಾಸ್ತಿ ದಿನ ರಾಜಕೀಯದಲ್ಲಿ‌‌ ಇರಲು‌ ಸಾಧ್ಯವಿಲ್ಲ. ನನಗೂ 60 ವರ್ಷ ಆಯಿತು. ಇನ್ನು ಎಷ್ಟು ವರ್ಷ ರಾಜಕಾರಣ ‌ಮಾಡಬಹುದು. 70 ವರ್ಷದವರೆಗೂ ರಾಜಕಾರಣ ಮಾಡಬಹುದು ಎಂದು ರಾಜಕೀಯ ನಿವೃತ್ತಿ ಬಗ್ಗೆ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಇಡಿ ವಿಚಾರಣೆ ಮುಗಿಸಿ ಮಾಧ್ಯಮದೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ನನಗೆ ಈಗ 60 ವರ್ಷ ಆಯಿತು. ಇನ್ನು 10 ವರ್ಷ ಮಾತ್ರ ರಾಜಕಾರಣ ಮಾಡಬಹುದು. ಆ ನಂತರ ನಿವೃತ್ತಿ ಪಡೆಯುವೆ ಎಂದು ಹೇಳಿದರು. ಕನಕಪುರದ‌ ನಿವಾಸದಲ್ಲಿ ನಡೆದ ಆರ್ಇ‌ಎಸ್ ಸಂಸ್ಥೆಯ ಚುನಾವಣೆ ಹಿನ್ನೆಲೆ‌ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಈಗಿರುವ ವ್ಯವಸ್ಥೆಯಲ್ಲಿ‌ ನಂಬಿಕೆ ಇಲ್ಲ. ಈಗ ಬದಲಾವಣೆ ಮಾಡಲು ಸಾಧ್ಯವಿಲ್ಲವೆಂದರೆ ಜಾಸ್ತಿ ದಿನ ರಾಜಕೀಯದಲ್ಲಿ‌‌ ಇರಲು‌ ಸಾಧ್ಯವಿಲ್ಲ ಎಂದರು.

- Advertisement -

Latest News

error: Content is protected !!