Saturday, June 6, 2026
Homeತಾಜಾ ಸುದ್ದಿಡಿಕೆ ಶಿವಕುಮಾರ್ ಪುತ್ರಿ-ಸಿದ್ದಾರ್ಥ್ ಪುತ್ರನ ವಿವಾಹ ಪ್ರಸ್ತಾಪಕ್ಕೆ ಇವರೇ ಕಾರಣವಂತೆ..

ಡಿಕೆ ಶಿವಕುಮಾರ್ ಪುತ್ರಿ-ಸಿದ್ದಾರ್ಥ್ ಪುತ್ರನ ವಿವಾಹ ಪ್ರಸ್ತಾಪಕ್ಕೆ ಇವರೇ ಕಾರಣವಂತೆ..

- Advertisement -
- Advertisement -

ಬೆಂಗಳೂರು: ಮದುವೆಗಳು ಸ್ವರ್ಗದಲ್ಲಿಯೇ ನಿಶ್ಚರವಾಗಿರುತ್ತವೆ ಎಂಬ ನಾಣ್ಣುಡಿಯಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ಕಾಫಿ ಡೇ ಮಾಲೀಕ ಸಿದ್ದಾರ್ಥ್ ಪುತ್ರ ಅಮರ್ಥ್ಯ ಹೆಗ್ಡೆ ಮದುವೆ ಮಾತುಕತೆಗೆ ಅವಧೂತ ವಿನಯ್ ಗುರೂಜಿ ಕಾರಣ ಎಂದು ಹೇಳಲಾಗುತ್ತಿದೆ.

ವಿನಯ್ ಗುರೂಜಿ ಒಪ್ಪಿಗೆ ಸೂಚಿಸಿದ ಮೇಲೆಯೇ ಡಿ.ಕೆ ಶಿವಕುಮಾರ್ ಮಗಳ ಮದುವೆ ಮಾತುಕತೆಯ ಕುರಿತು ಮುಂದುವರಿದಿದ್ದಾರೆ. ಮಾರ್ಚ್ 19 ರಂದು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡರ ಮಗಳ ಮದುವೆ ನಡೆದಿತ್ತು. ಅಂದು ಮದುವೆ ಕಾರ್ಯಕ್ರಮಕ್ಕೆ ಡಿ.ಕೆ.ಶಿವಕುಮಾರ್ ಕೂಡ ಬಂದಿದ್ದರು. ಆಗ ಡಿಕೆಶಿ ಈ ವಿಚಾರವಾಗಿ ಪ್ರಸ್ತಾಪ ನಡೆಸಿದ್ದರು.

ದಿವಂಗತ ಸಿದ್ಧಾರ್ಥ್ ಅವರ ಹಿರಿಯ ಪುತ್ರನೊಂದಿಗೆ ಮಗಳ ಮದುವೆ ಬಗ್ಗೆ ಮಾತುಕತೆ ನಡೆಸಲು ಡಿಕೆಶಿ ವಿನಯ್ ಗುರೂಜಿ ಬಳಿ ಸಲಹೆ ಕೇಳಿದ್ದರು. ಈ ವೇಳೆ ವಿನಯ್ ಗುರೂಜಿ ಮುಂದುವರಿಯಿರಿ ಅಂದಿದ್ದರಂತೆ. ಗುರೂಜಿ ಒಪ್ಪಿದ ಮೇಲೆಯೇ ಈ ಮಾತುಕತೆ ನಡೆದಿದೆ.

ಒಟ್ಟಿನಲ್ಲಿ ವಿನಯ್ ಗುರೂಜಿಯ ದಯೆಯಿಂದ ಈ ಮದುವೆ ಮಾತುಕತೆ ಫಲಪ್ರದವಾಗಿದಯಂತೆ. ಮತ್ತೊಂದು ವಿಶೇಷ ಅಂದ್ರೆ ಡಿಕೆಶಿ ಹಾಗೂ ಎಸ್ ಎಂ ಕೆ ಮನೆಯವರು ವಿನಯ್ ಗುರೂಜಿಯ ಪರಮ ಭಕ್ತರಾಗಿದ್ದಾರೆ.

- Advertisement -

Latest News

error: Content is protected !!