Saturday, April 27, 2024
Homeಕರಾವಳಿಮಂಗಳೂರು: ಪ್ರತಿ ಠಾಣಾ ಮಟ್ಟದಲ್ಲಿ ಯುವ ಸಮಿತಿ ರಚನೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ನಿರ್ಧಾರ

ಮಂಗಳೂರು: ಪ್ರತಿ ಠಾಣಾ ಮಟ್ಟದಲ್ಲಿ ಯುವ ಸಮಿತಿ ರಚನೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ನಿರ್ಧಾರ

spot_img
- Advertisement -
- Advertisement -

ಮಂಗಳೂರು: ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರ ಸೂಚನೆ ಹಾಗೂ ಪೊಲೀಸ್ ಆಯುಕ್ತರ ನಿರ್ದೇಶನದಂತೆ ಪ್ರತಿ ಠಾಣಾ ಮಟ್ಟದಲ್ಲಿ ಯುವ ಸಮಿತಿ ರಚನೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು‌ ಮುಂದಾಗಿದ್ದಾರೆ.

ಪೊಲೀಸ್‌ ಇಲಾಖೆಯ ಕರ್ತವ್ಯಕ್ಕೆ ಪೂರಕವಾಗಿ ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ಯುವಕರ ತಂಡವನ್ನು ರಚಿಸುವಂತೆ ಸೂಚಿಸಲಾಗಿದ್ದು, ಅದು ಮಂಗಳೂರಿನಿಂದಲೇ ಆರಂಭ ವಾಗಲಿದೆ ಎಂದು ಎಡಿಜಿಪಿ ಆಲೋಕ್‌ ಕುಮಾರ್‌ ಹೇಳಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಕೋಮು ಸಂಘರ್ಷಗಳ ಸಂದರ್ಭ ಶಾಂತಿ ಸಭೆಗಳನ್ನು ನಡೆಸಲಾಗುತ್ತದೆ. ಆದರೆ ಕೋಮು ಸಂಘರ್ಷಗಳಲ್ಲಿ ಹೆಚ್ಚಾಗಿ ಭಾಗಿಯಾಗುವ ಯುವಕರು ಶಾಂತಿ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಅವರನ್ನು ಸೇರಿಸಿಕೊಂಡು ಸಭೆ ನಡೆಸಿದರೆ ಸಮಾಜದಲ್ಲಿ ಸಾಕಷ್ಟು ಸಂಘರ್ಷ, ಅಪರಾಧ ಕೃತ್ಯಗಳ್ನು ತಡೆಯಲು ಸಾಧ್ಯ ಎಂಬ ಹಿನ್ನೆಲೆಯಲ್ಲಿ ಪ್ರತಿ ಠಾಣಾ ವ್ಯಾಪ್ತಿಯಲ್ಲೂ ಮಂಗಳೂರು ನಗರದಲ್ಲಿ ಯುವ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ.

- Advertisement -
spot_img

Latest News

error: Content is protected !!