- Advertisement -
- Advertisement -
ಮಂಗಳೂರು: ನಗರದ ಕೋಡಿಕಲ್ ನಲ್ಲಿ ನಾಗನ ಕಲ್ಲಿಗೆ ಹಾನಿಯಾದ ಪ್ರಕರಣದ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಸಮೀಪದ ಮನೆಯೊಂದರ ಬಳಿ ಇದ್ದ ದೈವದ ಮುಖವಾಡ (ಪಾಪೆ) ನಾಪತ್ತೆಯಾದ ಬಗ್ಗೆ ಇಂದು ವರದಿಯಾಗಿದೆ.
ಮನೆಯೊಂದರ ಬಳಿ ಇದ್ದ ಪರಿವಾರದ ದೈವದ ಮುಖವಾಡ ನಾಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಕಾರ್ಪೋರೇಟರ್ ಕಿರಣ್ ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ. ಸ್ಥಳೀಯ ಪೊಲೀಸರು ಸಹ ಭೇಟಿ ನೀಡಿದ್ದಾರೆ.
ಕೋಡಿಕಲ್‌ನ ನಾಗನ ಕಲ್ಲಿಗೆ ಹಾನಿಯಾದ ದಿನವೇ ಇದು ನಾಪತ್ತೆಯಾದ ಬಗ್ಗೆ ಸಂಶಯವಿದೆ, ಪೂಜೆ ಮಾಡಲೆಂದು ದೈವಸ್ಥಾನದ ಬಾಗಿಲು ತೆರೆದಾಗ ಈ ಕೃತ್ಯ ಕಂಡುಬಂದಿದೆ.
- Advertisement -