Wednesday, May 1, 2024
Homeಇತರಬಂಟ್ವಾಳ: ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟ ಇದರ ಬಂಟ್ವಾಳ ಮಂಡಲದ ಪದಗ್ರಹಣ ಸಮಾರಂಭ...!

ಬಂಟ್ವಾಳ: ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟ ಇದರ ಬಂಟ್ವಾಳ ಮಂಡಲದ ಪದಗ್ರಹಣ ಸಮಾರಂಭ…!

spot_img
- Advertisement -
- Advertisement -

ಬಂಟ್ವಾಳ: ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟ ಇದರ ಬಂಟ್ವಾಳ ಮಂಡಲದ ಪದಗ್ರಹಣ ಸಮಾರಂಭ ಹಾಗೂ ಕಾರ್ಮಿಕ ಇಲಾಖೆಯ ಮಾಹಿತಿ ಕಾರ್ಯಕ್ರಮ ಮತ್ತು ನೋಂದಣಿ ಅಭಿಯಾನ ಕಾರ್ಯ ಕ್ರಮ ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಯಕ್ಷಧ್ರುವ ಪಟ್ಲ ಫೌಂಡೇಷನ್ ಅಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ, ಅವರು ಮಾತನಾಡಿ ಕಲಾವಿದರು ಜೊತೆಯಾಗಿ ಸಂಘಟಿತರಾಗಬೇಕು, ಸರಕಾರದ ಮೂಲಕ ಕಲಾವಿದರ ನೋಂದಣಿ ಕಾರ್ಯಕ್ರಮ ಕಲಾವಿದರ ಬದುಕಿಗೆ ಹೊಸ ರೂಪ ನೀಡಿದೆ.

ಯಕ್ಷಗಾನ ಕಲಾವಿದರ ಜೊತೆಗೆ ಕಲಾ ವಲಯವನ್ನು ಬಿಜೆಪಿ ಪಕ್ಷ ನೋಡಿ ಅವರ ಬದುಕಿಗೆ ನೆರವು ನೀಡುವ ಮಹಾತ್ಕಾರ್ಯ ಮಾಡಿದೆ ಎಂದು ಅವರು ಹೇಳಿದರು. ಕಲಾವಿದರಿಗಾಗಿ ತುಡಿತ ಮಿಡಿತಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವವರು ಅಧ್ಯಕ್ಷರಾಗಿ ಬರಲಿ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಬಿಜೆಪಿ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ ಅವರು ಮಾತನಾಡಿ, ಕಲಾವಿದರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಬಿಜೆಪಿ ಸದಾ ಬದ್ದವಾಗಿದೆ. ಪ್ರಕೋಷ್ಟಕ್ಕೆ ಕಲಾವಿದರು ಪೂರ್ಣ ರೀತಿಯ ಸಹಾಯ ನೀಡುವಂತೆ ಅವರು ಮನವಿ ಮಾಡಿದರು.

ವೇದಿಕೆಯಲ್ಲಿ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ಅಧ್ಯಕ್ಷ
ಅಶೋಕ್ ಶೆಟ್ಟಿ ಸರಪಾಡಿ, ತಾಲೂಕು ಸಂಚಾಲಕ ದಿನೇಶ್ ರಾಯಿ ಉಪಸ್ಥಿತರಿದ್ದರು.

ಕಾರ್ಮಿಕ ಇಲಾಖೆ ಅಧಿಕಾರಿ ಗ್ರೇಸ್ ಮೆಲ್ಬಿನ್ ಅಲ್ಮೇಡ ಅವರು ಕಾರ್ಮಿಕ ಇಲಾಖೆಯ ಮಾಹಿತಿ ನೀಡಿದರು. ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ಅಧ್ಯಕ್ಷ ಅಶೋಕ್ ಶೆಟ್ಟಿ ಸರಪಾಡಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಂಚಾಲಕ ದಿನೇಶ್ ರಾಯಿ ಸ್ವಾಗತಿಸಿದರು ಹಾಗು ರಾಜೇಶ್ ಕೊಟ್ಟಾರಿ ಕಲ್ಲಡ್ಕ ಅವರು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕಲಾ ಕ್ಷೇತ್ರದಲ್ಲಿ ವಿವಿಧ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು.

- Advertisement -
spot_img

Latest News

error: Content is protected !!