Thursday, August 20, 2026
Homeಕರಾವಳಿಜಿಲ್ಲಾ ಕಾಂಗ್ರೆಸ್ ಮುಖಂಡ, ಸಮಾಜಸೇವಕ ಶೇಖರ್ ಸುವರ್ಣ ಬೆಂಗ್ರೆ ನಿಧನ

ಜಿಲ್ಲಾ ಕಾಂಗ್ರೆಸ್ ಮುಖಂಡ, ಸಮಾಜಸೇವಕ ಶೇಖರ್ ಸುವರ್ಣ ಬೆಂಗ್ರೆ ನಿಧನ

- Advertisement -
- Advertisement -

ಮಂಗಳೂರು: ಜಿಲ್ಲಾ ಕಾಂಗ್ರೆಸ್ ಮುಖಂಡ, ಸಮಾಜಸೇವಕ ಶೇಖರ್ ಸುವರ್ಣ ಬೆಂಗ್ರೆಯವರು ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾದರು.

ಅವರಿಗೆ 81 ವರ್ಷ ವಯಸ್ಸಾಗಿದ್ದು, ಪತ್ನಿ ಮತ್ತು ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಬೆಂಗ್ರೆ ಮಹಾಜನ ಸಭಾ ಅಧ್ಯಕ್ಷರಾಗಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿ ಜನಮನ್ನಣೆ ಪಡೆದಿದ್ದರು. ಕಾಂಗ್ರೆಸ್ ಪಕ್ಷದ ಮಂಗಳೂರು ದಕ್ಷಿಣದ ವಿಭಾಗದ ಉಪಾಧ್ಯಕ್ಷರಾಗಿ ರಾಜಕೀಯ ಸೇವೆಯನ್ನು ಮಾಡಿದ ಶ್ರೀಯುತರು ಬೆಂಗ್ರೆ ಶೇಷಾಶಯನ ಮಂದಿರ ಅಲ್ಲದೆ ಇತರ ಧಾರ್ಮಿಕ ಕ್ಷೇತ್ರದಲ್ಲಿ ತನ್ನ ಸೇವೆಯನ್ನು ನೀಡಿದ್ದರು.

ಮೃತರ ಅಂತಿಮ ಯಾತ್ರೆಯು ಭಾನುವಾರ ಬೆಳಗ್ಗೆ ಗಂಟೆ 10 ಕ್ಕೆ ಮಂಗಳೂರು ಸ್ಯಾಡ್ಸ್ ಪಿಟ್ ಬೆಂಗ್ರೆಯ ಸ್ವಗೃಹದಲ್ಲಿ ಜರಗಲಿರುವುದು.

ಬೆಂಗ್ರೆ ಮಹಾ ಜನ ಸಭಾದ ಅಧ್ಯಕ್ಷ ಚೇತನ್ ಬೆಂಗ್ರೆ, ಮಾಜಿ ಅಧ್ಯಕ್ಷರುಗಳಾದ ಮೋಹನ್ ಬೆಂಗ್ರೆ, ಕೇಶವ ಕರ್ಕೇರ, ಕರ್ನಾಟಕ ಪರ್ಸಿನ್ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ಬೆಂಗ್ರೆ, ದಕ್ಷಿಣ ಕನ್ನಡ ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್, ನಿರೇಶ್ವಾಲ್ಯ ಮೊಗವೀರ ಗ್ರಾಮಸಭಾದ ಅಧ್ಯಕ್ಷ ಸುರೇಶ್ ಸುವರ್ಣ, ಪಡುಹೊಯಿಗೆ ಮೊಗವೀರ ಗ್ರಾಮ ಸಭಾದ ಅಧ್ಯಕ್ಷ ಗಂಗಾಧರ ಸಾಲ್ಯಾನ್, ಕೊಂಕಣಿ ಖಾರ್ವಿ ಮಹಾಜನ ಸಭಾದ ಅಧ್ಯಕ್ಷ ದಿವಾಕರ ಖಾರ್ವಿ ಮುಂತಾದವರು ಸಂತಾಪ ಸೂಚಿಸಿದರು.

- Advertisement -

Latest News

error: Content is protected !!