Friday, June 5, 2026
Homeತಾಜಾ ಸುದ್ದಿಕಡಬ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಭೇಟಿ: ಇಕ್ಕಟ್ಟಿನ ಕಚೇರಿಯಲ್ಲಿ ಪರದಾಡಿದ ಸಾರ್ವಜನಿಕರು

ಕಡಬ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಭೇಟಿ: ಇಕ್ಕಟ್ಟಿನ ಕಚೇರಿಯಲ್ಲಿ ಪರದಾಡಿದ ಸಾರ್ವಜನಿಕರು

- Advertisement -
- Advertisement -

ಕಡಬ: ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕಡಬ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಭೇಟಿ ನೀಡಿದ್ರು.ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ರು. ಆದ್ರೆ ಇಕ್ಕಟ್ಟಿನ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಪರದಾಟ ನಡೆಸುವಂತಾಗಿದೆ.

ಒಂದೆಡೆ ಮಳೆ, ಇನ್ನೊಂದೆಡೆ ಕಚೇರಿಯ ಎದುರು ಪುರುಷರು, ಮಹಿಳೆಯರು ಅರ್ಜಿ ಹಿಡಿದುಕೊಂಡು ನಿಂತಿದ್ರು. ಜಿಲ್ಲಾಧಿಕಾರಿ ತಹಸೀಲ್ದಾರ್ ಅವರ ಕಛೇರಿಯ ಒಳಗಡೆ ಜನರ ಸಮಸ್ಯೆ ಆಲಿಸಿ ಪರಿಹಾರ ನೀಡಿದ್ರು. ಇದೊಂದು ಉತ್ತಮ ಕಾರ್ಯಕ್ರಮವಾದರೂ ಇದನ್ನು ಒಂದು ಸಭಾಭವನದಲ್ಲಿ ಮಾಡಿದ್ದರೆ ಅನುಕೂಲವಾಗುತ್ತಿತ್ತು ಅನ್ನೋದು ಸಾರ್ವಜನಿಕರ ಅಭಿಪ್ರಾಯವಾಗಿತ್ತು..

- Advertisement -

Latest News

error: Content is protected !!