- Advertisement -
![]()
- Advertisement -
ಬೆಂಗಳೂರು: ಮೇ 16 ರಂದು ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ಉದ್ಘಾಟನೆಯಾಗಲಿದೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ಜಿಲ್ಲಾ ಸೌಧವನ್ನು ಉದ್ಘಾಟಿಸಲಿದ್ದು, ಅಂದೇ ಸುಮಾರು ಹತ್ತು ಸಾವಿರ ಜನರಿಗೆ ದರಖಾಸ್ತು ಪೋಡಿ ವಿತರಣೆಯಾಗಲಿದೆ.
ಬೆಂಗಳೂರಿನಲ್ಲಿ ಇಂದು ವಿಕಾಸಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಮಾಹಿತಿ ನೀಡಿದ್ದಾರೆ.
2017 ರಲ್ಲಿ ಆರಂಭವಾದ ಜಿಲ್ಲಾ ಸೌಧದ ಕಾಮಗಾರಿ ನಾಲ್ಕು ವರ್ಷಗಳ ಕಾಲ ಸ್ಥಗಿತಗೊಂಡಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಯೆ ಸಿದ್ಧವಾಗಿದೆ.
- Advertisement -


