Tuesday, September 10, 2024
Homeಕರಾವಳಿಬಂಟ್ವಾಳ: ಗಡಿ ಭಾಗದ 328 ಬಡ ಕುಟುಂಬಗಳಿಗೆ ಬಿಜೆಪಿ ಸಹಾಯವಾಣಿ ತಂಡದಿಂದ ಅಕ್ಕಿ ವಿತರಣೆ

ಬಂಟ್ವಾಳ: ಗಡಿ ಭಾಗದ 328 ಬಡ ಕುಟುಂಬಗಳಿಗೆ ಬಿಜೆಪಿ ಸಹಾಯವಾಣಿ ತಂಡದಿಂದ ಅಕ್ಕಿ ವಿತರಣೆ

spot_img
- Advertisement -
- Advertisement -

ಬಂಟ್ವಾಳ: ಕೊರೊನಾ ಮಹಾಮಾರಿಯಿಂದ ಭಾರತವನ್ನು ರಕ್ಷಿಸುವ ಉದ್ಧೇಶಕ್ಕಾಗಿ ಕೈಗೊಂಡಿರುವ ಭಾರತ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಬಂಟ್ವಾಳ ತಾಲೂಕಿನ ಅರಳ ಗ್ರಾಮ ಮತ್ತು ಕೂರಿಯಾಳ ಗಡಿ ಭಾಗದ 328 ಬಡ ಕುಟುಂಬಗಳಿಗೆ ಅರಳ ಬಿಜೆಪಿ ಸಹಾಯವಾಣಿ ತಂಡದ ವತಿಯಿಂದ ಇಂದು ಅಕ್ಕಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಬಂಟ್ವಾಳ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ಉಮೇಶ್ ಡಿ.ಎಂ. ಅರಳ ಗ್ರಾಮ ಪಂಚಾಯತಿನ ಹಿರಿಯ ಸದಸ್ಯರಾದ ಲಕ್ಷ್ಮೀಧರ ಶೆಟ್ಟಿ ಮಧ್ಯಾಳ, ಅರಳ ಬಿಜೆಪಿ ಗ್ರಾಮ ಪಂಚಾಯತ್ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾಗಿದ್ದ ನಾಗೇಶ್ ಮಾಣೈ ಕೋಟೆ, ಅರಳ ಬೂತ್ ಸಂಖ್ಯೆ 32ರ ಬಿಜೆಪಿ ಅಧ್ಯಕ್ಷರಾದ ರಂಜನ್ ಕುಮಾರ್ ಶೆಟ್ಟಿ, ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿಯ ಪದಾಧಿಕಾರಿಗಳಾದ ರವಿ ಅರಸ ಕಲ್ಲೇರಿ, ಮಂಜಪ್ಪ, ಸುಕುಮಾರ ಶೆಟ್ಟಿ ನಾಟಬೆಟ್ಟು, ಅರಳ ಬೂತ್ ಸಂಖ್ಯೆ 32ರ ನಿಕಟಪೂರ್ವ ಬಿಜೆಪಿ ಅಧ್ಯಕ್ಷರಾಗಿದ್ದ ತಿಮ್ಮಪ್ಪ ಪೂಜಾರಿ ಉದ್ದೊಟ್ಟು, ನಿಕಟಪೂರ್ವ ಪ್ರ. ಕಾರ್ಯದರ್ಶಿ ಯೋಗೀಶ್ ಕುಲಾಲ್, ಬೂತ್ ಸಂಖ್ಯೆ 34ರ ಬಿಜೆಪಿ ಅಧ್ಯಕ್ಷರಾದ ಅರ್ಜುನ್, ಹಿಂದೂ ಜಾಗರಣಾ ವೇದಿಕೆ ಸೊರ್ನಾಡು ಶಾಖೆಯ ಅಧ್ಯಕ್ಷರಾದ ಸಂತೋಷ್ ಸೊರ್ನಾಡು, ಅರಳ ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮೀಧರ ಪೂಜಾರಿ, ಬೂತ್ ಸಂಖ್ಯೆ 31ರ ನಿಕಟಪೂರ್ವ ಬಿಜೆಪಿ ಅಧ್ಯಕ್ಷರಾಗಿದ್ದ ಪ್ರಸನ್ನ ಕುಮಾರ್ ಶೆಟ್ಟಿ, ನವಶಕ್ತಿ ಯುವಕ ಮಂಡಲದ ಅಧ್ಯಕ್ಷ ಶಿವರಾಮ ಸಂಗಬೆಟ್ಟು, ಆರೆಸ್ಸೆಸ್ ನ ಅರಳ ಮಂಡಲ ಕಾರ್ಯವಾಹ ಶ್ರೀ ಅರುಣ್ ಕುಮಾರ್, ಪ್ರಮುಖರಾದ ಬಾಬು ಶೇಖ ನಾಟಬೆಟ್ಟು, ಚಂದ್ರಶೇಖರ ಶೆಟ್ಟಿ ಪಂಬದಗದ್ದೆ, ಸನತ್ ಕುಮಾರ್ ಅರಸ, ಕೌಶಿಕ್ ನವಗ್ರಾಮ, ವಿಶ್ವನಾಥ್ ಪೂಜಾರಿ ತಡ್ಯಾಲ, ಗಿರೀಶ್ ಶೆಟ್ಟಿ ಪಾಚಿಲೋಡಿ, ವಿಶ್ವನಾಥ್ ಮೇಲಾಂಟ, ಸಂತೋಷ್ ಶೆಟ್ಟಿ ಕೋಟೆ, ಕಿರಣ್ ತಾರಿಪಡ್ಪು, ಸತೀಶ್ ದರ್ಭೆ, ರಿತೇಶ್ ಆಚಾರ್ಯ ಕರಿಮಾರು, ಅಶೋಕ್ ಅಲ್ಮುಡೆ ಮುಂತಾದವರು ಭಾಗವಹಿಸಿ ಸಹಕರಿಸಿದರು.

- Advertisement -
spot_img

Latest News

error: Content is protected !!