Saturday, April 27, 2024
Homeಕರಾವಳಿಬಂಟ್ವಾಳ: ಕೊರೋನಾದಿಂದ ಮೃತಪಟ್ಟವರಿಗೆ ಪರಿಹಾರ ಚೆಕ್ ವಿತರಣೆ

ಬಂಟ್ವಾಳ: ಕೊರೋನಾದಿಂದ ಮೃತಪಟ್ಟವರಿಗೆ ಪರಿಹಾರ ಚೆಕ್ ವಿತರಣೆ

spot_img
- Advertisement -
- Advertisement -

ಬಂಟ್ವಾಳ: ಬಂಟ್ವಾಳ ‌ತಾಲೂಕಿನಲ್ಲಿ 216 ಮಂದಿ ಕೋವಿಡ್ ನಿಂದ ಮೃತಪಟ್ಟ ಕುಟುಂಬ ಆರ್ಜಿ ಸಲ್ಲಿಸಿದ್ದು, 192 ಅರ್ಜಿ ಗಳು ಸಿಂಧುವಾಗಿದ್ದು , ತಾಲೂಕಿನಲ್ಲಿ 63 ಮಂದಿ ಗೆ ಮೊದಲ ಕಂತಿನ ಪರಿಹಾರ ಮೊತ್ತ ಬಿಡುಗಡೆಯಾಗಿದೆ.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಇವರು ಬಂಟ್ವಾಳ ಕ್ಷೇತ್ರದ 43 ಮಂದಿಗೆ ಪರಿಹಾರ ಮೊತ್ತದ ಚೆಕ್ ವಿತರಿಸಲಾಗಿದೆ ಎಂದು ಅವರು ಹೇಳಿದರು.

ಬಿಸಿರೋಡಿನ ಶಾಸಕ ಕಚೇರಿಯಲ್ಲಿ ಕೋವಿಡ್ ಮೃತರಿಗೆ ಸರಕಾರದಿಂದ ನೀಡಲ್ಪಟ್ಟ ತಲಾ ಒಂದು ಲಕ್ಷ ರೂಗಳ ಪರಿಹಾರ ಮೊತ್ತದ ಚೆಕ್ ವಿತರಿಸಿದರು.

ಮೃತ ಬಿ.ಪಿ.ಎಲ್.ಕುಟುಂಬದ ಸದಸ್ಯರಿಗೆ ತಲಾ 50 ಸಾವಿರ ರೂ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ, ಬಂಟ್ವಾಳದಲ್ಲಿ 11 ಮಂದಿ ಕೆಲವೊಂದು ಕಾರಣಗಳಿಂದ ಪರಿಹಾರ ಮೊತ್ತ ಬೇಡ ಎಂದು ತಿಳಿಸಿದ್ದಾರೆ ಎಂದು ಹೇಳಿದರು.

ಶೀಘ್ರವಾಗಿ ಕೋವಿಡ್ ನಿಂದ ಮೃತಪಟ್ಟ ಪ್ರತಿಯೊಬ್ಬರಿಗೂ ಸರಕಾರದ ಪರಿಹಾರದ ಮೊತ್ತವನ್ನು ನೀಡಲಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಸರಕಾರ ಉಚಿತ ಅಕ್ಕಿ, ಪ್ರತಿಯೊಬ್ಬರಿಗೂ ಉಚಿತ ವ್ಯಾಕ್ಸಿನೇಷನ್‌ ಅನ್ನು ನೀಡಿದೆ ಎಂದು ಅವರು ಹೇಳಿದರು.

ಹಾಗೇ ರೂಪಾಂತರಿ ವೈರಸ್ ಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಭಯಪಡದೆ ದೈನಂದಿನ ಜೀವನದ ಕೆಲಸವನ್ನು ಮಾಡಬೇಕು ಎಂದರು.

ಜಿ.ಪಂ.ಮಾಜಿ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಉಳಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಮೈರ, ವೀರಕಂಭ ಗ್ರಾ.ಪಂ.ಅದ್ಯಕ್ಷ ದಿನೇಶ್, ಬರಿಮಾರು ಗ್ರಾ.ಪಂ.ಅಧ್ಯಕ್ಷ ಶಶಿಕಲಾ, ಉಪಾಧ್ಯಕ್ಷ ಸದಾಶಿವ ಬರಿಮಾರು, ಅಮ್ಮುಂಜೆ ಗ್ರಾ.ಪಂ.ಅಧ್ಯಕ್ಷ ವಾಮನ ಆಚಾರ್ಯ, ರಾಯಿ ಗ್ರಾ.ಪಂ.ಉಪಾಧ್ಯಕ್ಷ ರಶ್ಮಿತ್ ಕೈತ್ರೋಡಿ, ಮಂಚಿ ಗ್ರಾ.ಪಂ.ಉಪಾಧ್ಯಕ್ಷ ಮೋಹನ್ ದಾಸ ಶೆಟ್ಟಿ, ನರಿಕೊಂಬು ಗ್ರಾ.ಪಂ.ಉಪಾಧ್ಯಕ್ಷ ಪ್ರಕಾಶ್ ಮಡಿಮೊಗೆರು, ಪುರಸಭಾ ಸದಸ್ಯೆ ಮೀನಾಕ್ಷಿ, ಉಪ ತಹಶೀಲ್ದಾರ್ ನರೇಂನಾಥ್ ಭಟ್ ಮಿತ್ರರು, ಪಾಣೆಮಂಗಳೂರು ಕಂದಾಯ ನಿರೀಕ್ಷಕ ಧರ್ಮ ಸಾಮ್ರಾಜ್ಯ, ವಿಟ್ಲ ಕಂದಾಯ ನಿರೀಕ್ಷಕ ಮಂಜುನಾಥ್ ಕೆ.ಎಚ್, ಬಂಟ್ವಾಳ ಕಂದಾಯ ನಿರೀಕ್ಷಕ ಕುಮಾರ್ ಟಿ.ಸಿ, ವಿವಿಧ ಗ್ರಾ.ಪಂ.ಸದಸ್ಯರು, ಗ್ರಾಮ ಕರಣೀಕರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!