Sunday, June 7, 2026
Homeಕರಾವಳಿಸುಳ್ಯ: ಮನೆಯ ಹಳೆಯ ಶೌಚಾಲಯದ ಗೋಡೆ ಕೆಡಹುವ ವೇಳೆ ಗೋಡೆ ಕುಸಿತ, ಇಬ್ಬರು ಮಹಿಳೆಯರು ಸಾವು...

ಸುಳ್ಯ: ಮನೆಯ ಹಳೆಯ ಶೌಚಾಲಯದ ಗೋಡೆ ಕೆಡಹುವ ವೇಳೆ ಗೋಡೆ ಕುಸಿತ, ಇಬ್ಬರು ಮಹಿಳೆಯರು ಸಾವು !

- Advertisement -
- Advertisement -

ನರ್ಲಡ್ಕ ನಿವಾಸಿ ಹರೀಶ ನಾಯ್ಕ ಎಂಬವರ ಮನೆಯ ಹಳೆಯ ಶೌಚಾಲಯದ ಗೋಡೆ ಕೆಡಹುವ ವೇಳೆ ಈ ದುರ್ಘಟನೆ ನಡೆದಿದೆ.

ಹಳೆಯ ಗೋಡೆ ಕೆಡವುತಿದ್ದ ವೇಳೆ ಗೋಡೆ ಕುಸಿದು ಇಬ್ಬರು ಮೃತಪಟ್ಟ ಘಟನೆ ನಿಂತಿಕಲ್ಲು ಸಮೀಪದ ಎಣ್ಮೂರು ನರ್ಲಡ್ಕ ಎಂಬಲ್ಲಿ ಡಿ.19ರಂದು ನಡೆದಿದೆ.

ಶೌಚಾಲಯದ ಹಳೆಯ ಗೋಡೆಯನ್ನು ಕೆಡವುತ್ತಿದ್ದ ವೇಳೆ ಮಣ್ಣಿನ ಇಟ್ಟಿಗೆಯ ಗೋಡೆ ಮೈಮೇಲೆ ಕುಸಿದು ಬಿದ್ದು ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಕುಸಿದು ಬಿದ್ದಿದೆ.

ಹಲವು ಜನ ಕೆಲಸಗಾರರ ಜತೆ ಸಮೀಪದ ಮನೆಯ ಬೀಪಾತುಮ್ಮ ಮತ್ತು ನೆಬಿಸಾ ಎಂಬವರು ಕಾಮಗಾರಿ ಕೆಲಸದಲ್ಲಿ ತೊಡಗಿದ್ದರು. ಆ ವೇಳೆ ಮಣ್ಣಿನ ಇಟ್ಟಿಗೆಯ ಗೋಡೆ ಇವರ ಮೇಲೆ ಕುಸಿದು ಬಿತ್ತು. ತಕ್ಷಣ ಅಲ್ಲಿದ್ದವರು ಸೇರಿ ಇಬ್ಬರನ್ನು ಮಣ್ಣಿನ ರಾಶಿಯಿಂದ ಹೊರತೆಗೆದು ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದರು.

ನೆಬಿಸ (45 ವರ್ಷ) ರವರನ್ನು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಸ್ಪತ್ರೆ ತಲುಪುವ ವೇಳೆಗೆ ಅವರೂ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.ಕಾಣಿಯೂರು ತಲುಪುತಿದ್ದಂತೆ ಬೀಪಾತುಮ್ಮ(60 ವರ್ಷ ) ರವರು ಕೊನೆಯುಸಿರೆಳೆದುದರಿಂದ ಅವರ ಮೃತ ದೇಹವನ್ನು ಹಿಂತಿರುಗಿ ನರ್ಲಡ್ಕಕ್ಕೆ ತೆಗೆದುಕೊಂಡು ಹೋಗಲಾಗಿದೆ.

ಘಟನಾ ಸ್ಥಳಕ್ಕೆ ಬೆಳ್ಳಾರೆ ಎಸ್ ಐ ಆಂಜನೇಯ ರೆಡ್ಡಿ ತೆರಳಿ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!