Thursday, June 4, 2026
Homeಕರಾವಳಿಮಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ ಯುವಕನ ಕುಟುಂಬಕ್ಕೆ ಪಡಿತರ ಸಾಮಾಗ್ರಿ ವಿತರಣೆ

ಮಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ ಯುವಕನ ಕುಟುಂಬಕ್ಕೆ ಪಡಿತರ ಸಾಮಾಗ್ರಿ ವಿತರಣೆ

- Advertisement -
- Advertisement -

ಬಂಟ್ವಾಳ: ಮಂಗಳೂರಿನ ಪಡೀಲ್ ನಲ್ಲಿ  4ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಭಜರಂಗದಳ ಕಾರ್ಯಕರ್ತ ವಿಜಯ್ ಪುಣ್ಕೆದಡಿ ಅವರ ಕುಟುಂಬಕ್ಕೆ ಸರಪಾಡಿ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವತಿಯಿಂದ ಪಡಿತರ ಸಾಮಾಗ್ರಿ ವಿತರಿಸಲಾಯಿತು.

ಬಂಟ್ವಾಳ ತಾಲೂಕು ಅಜಿಲಮೊಗರು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಜೈ ಹನುಮಾನ್ ಶಾಖೆಯ ನಿಯೋಗವು ಮೃತ ವಿಜಯ್ ಪುಣ್ಕೆದಡಿ ನಿವಾಸಕ್ಕೆ ತೆರಳಿ ಪಡಿತರ ಸಾಮಾಗ್ರಿ ವಿತರಿಸಿತು.

ಈ ವೇಳೆ ಧರ್ಮದರ್ಶಿ ದೇಜಪ್ಪ ಬಾಚಕೆರೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಇಡ್ಯಡ್ಕ ಮೋಹನ ಗೌಡ, ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ, ಸರಪಾಡಿ ಅಶೋಕ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!