Tuesday, June 9, 2026
Homeಕರಾವಳಿಕಾಪಿಕಾಡ್ ನಿರ್ದೇಶನದ `ಪುರುಷೋತ್ತಮನ ಪ್ರಸಂಗ' ಸಿನೆಮಾ ಮಾರ್ಚ್ 1ರಂದು ತೆರೆಗೆ

ಕಾಪಿಕಾಡ್ ನಿರ್ದೇಶನದ `ಪುರುಷೋತ್ತಮನ ಪ್ರಸಂಗ’ ಸಿನೆಮಾ ಮಾರ್ಚ್ 1ರಂದು ತೆರೆಗೆ

- Advertisement -
- Advertisement -

ಮಂಗಳೂರು; ರಾಷ್ಟ್ರಕೂಟ ಪಿಚ್ಚರ್ಸ್ ಲಾಂಛನದಲ್ಲಿ ಉದ್ಯಮಿ ವಿ.ರವಿ ಕುಮಾರ್ ನಿರ್ಮಾಣದಲ್ಲಿ ‘ತೆಲಿಕೆದ ಬೊಳ್ಳಿ’ ದೇವದಾಸ್ ಕಾಪಿಕಾಡ್ ನಿರ್ದೇಶನದ “ಪುರುಷೋತ್ತಮನ ಪ್ರಸಂಗ’ ಕನ್ನಡ ಚಿತ್ರವು ಮಾರ್ಚ್ ಒಂದರದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಈ ಸಿನೆಮಾದ ಮೂಲಕ ಅಜಯ್ ಎಂಬ ನವ ನಟನನ್ನು ಹಾಗೂ ರಿಷಿಕಾ ನಾಯ್ಕ ಮತ್ತು ದೀಪಿಕಾ ಎಂಬರನ್ನು ದೇವದಾಸ್ ಕಾಪಿಕಾಡ್ ಕನ್ನಡಕ್ಕೆ ಪರಿಚಯಿಸಿದ್ದಾರೆ. ದಿಗ್ಗಜರನ್ನೊಳಗೊಂಡ ತಾರಾಗಣದಲ್ಲಿ ಬಹಳಷ್ಟು ಹಾಸ್ಯ ಮಂದಿ ಹೊಸಬರಿಗೂ ಅವಕಾಶ ನೀಡಲಾಗಿದೆ.

ಒಂದೇ ಹಂತದಲ್ಲಿ ಸತತ 29 ದಿನಗಳ ಕಾಲ ಪುರುಷೋತ್ತಮನ ಪ್ರಸಂಗ ಸಿನೆಮಾಕ್ಕೆ ಚಿತ್ರೀಕರಣ ನಡೆದಿತ್ತು. ಮಂಗಳೂರು ಸುತ್ತಮುತ್ತ, ಬಜಪೆ, ಮುರನಗರ, ಕೆಂಜಾರ್ ಮೊದಲಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದ್ದು, ದುಬಾಯಿಯಲ್ಲಿ 7 ದಿನಗಳ ಕಾಲ ಚಿತ್ರೀಕರಣ ನಡೆದಿತ್ತು. ಉತ್ತಮ ಹಾಸ್ಯ ಕಥಾಹಂದರವನ್ನು ಒಳಗೊಂಡಿರುವ ಸಿನೆಮಾದಲ್ಲಿ ಪ್ರತಿಯೊಂದು ಪಾತ್ರವೂ ಇಲ್ಲಿ ಕತೆಗೆ ಪೂರಕವಾಗಿ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ.

ಕನ್ನಡದಲ್ಲಿ ನಟನಾಗಿ ಗುರುತಿಸಿ ಹೆಸರು ಗಳಿಸಿರುವ ದೇವದಾಸ್ ಕಾಪಿಕಾಡ್ ಮೊದಲನೇ ಬಾರಿಗೆ ಕನ್ನಡದಲ್ಲಿ ಕತೆ, ಚಿತ್ರಕತೆ, ಸಾಹಿತ್ಯ, ಸಂಭಾಷಣೆ ಬರೆದು ಸಿನೆಮಾ ನಿರ್ದೇಶಿಸುತ್ತಿದ್ದಾರೆ. ಅಲ್ಲದೆ ಒಂದು ಪ್ರಮುಖ ಪಾತ್ರದಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ಅರ್ಜುನ್ ಕಾಪಿಕಾಡ್ ಸಹ ನಿರ್ದೇಶಕರಾಗಿ ಸಾಥ್ ನೀಡಿದ್ದಾರೆ.

ತಾರಾಗಣದಲ್ಲಿ ಅಜಯ್, ರಿಷಿಕಾ ನಾಯ್ಕ, ದೀಪಿಕಾ, ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸಾಯಿಕೃಷ್ಣ ಕುಡ್, ಶೋಭರಾಜ್ ಪಾವೂರು, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ, ಜ್ಯೋತಿಷ್ ಶೆಟ್ಟಿ ಹಾಗೂ ಇತರರು ಇದ್ದಾರೆ.

ವಿಷ್ಣು ಕ್ಯಾಮರಾ ಕೈಚಳಕವಿದ್ದು, ನಕುಲ್ ಅಭಯಂಕರ್ ಸಂಗೀತವಿದೆ.

- Advertisement -

Latest News

error: Content is protected !!