Thursday, June 25, 2026
Homeತಾಜಾ ಸುದ್ದಿಸಿಲಿಕಾನ್‍ ಸಿಟಿಯಲ್ಲಿ ಹೀಗೊಬ್ಬ ಒಳ್ಳೆಯ ಕಳ್ಳ; ಶ್ರೀಮಂತರ ಮನೆಗಳಿಂದ ಕದ್ದು ದಾನ ಧರ್ಮ ಮಾಡುತ್ತಾನೆ ವಿಚಿತ್ರ...

ಸಿಲಿಕಾನ್‍ ಸಿಟಿಯಲ್ಲಿ ಹೀಗೊಬ್ಬ ಒಳ್ಳೆಯ ಕಳ್ಳ; ಶ್ರೀಮಂತರ ಮನೆಗಳಿಂದ ಕದ್ದು ದಾನ ಧರ್ಮ ಮಾಡುತ್ತಾನೆ ವಿಚಿತ್ರ ಆಸಾಮಿ

- Advertisement -
- Advertisement -

ಬೆಂಗಳೂರು : ಸಿಲಿಕಾನ್‍ ಸಿಟಿಯಲ್ಲಿ ಒಬ್ಬ ಒಳ್ಳೆಯ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಈತನ ಕಥೆ ಕೇಳಿದ್ರೆ ನಿಜಕ್ಕೂ ನೀವು ಶಾಕ್ ಆಗ್ತೀರಾ.

ಹೌದು. ಶ್ರೀಮಂತರ ಮನೆ ಹುಡುಕಿ ಕನ್ನ ಹಾಕುವ ಈ ಕಳ್ಳ ಬಂದ ಹಣದಿಂದ ಐಶಾರಾಮಿ ಜೀವನ ನಡೆಸುತ್ತಾ ಉಳಿದ ಹಣದಿಂದ ದಾನ ಧರ್ಮ ಮಾಡುತ್ತಾ ಬದುಕುತ್ತಿದ್ದ.  ಇದೀಗ ಕೊನೆಗೂ ಆತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಬಂಧಿತ ಆರೋಪಿಯನ್ನು ಜಾನ್ ಮೆಲ್ಟಿನ್ ಎಂದು ಗುರುತಿಸಲಾಗಿದೆ. ಐಷಾರಾಮಿ ಜೀವನಕ್ಕಾಗಿ ಶ್ರೀಮಂತರ ಮನೆಗಳಲ್ಲಿ ಕಳ್ಳತನ ನಡೆಸುತ್ತಿದ್ದ ಆರೋಪಿ ಬಂದ ಹಣದಿಂದ ತನ್ನ ಐಷಾರಾಮಿ ಜೀವನ ನಡೆಸಿ ಉಳಿದ ಹಣವನ್ನು ಚರ್ಚ್, ದೇವಾಲಯಗಳ ಹುಂಡಿಗೆ ಹಾಕುತ್ತಿದ್ದನು.

ಹಲವು ಬಾರಿ ಬಂಧನವಾದ ಈತ ನಂತರ ಜಾಮೀನು ಮೇಲೆ ಹೊರಗೆ ಬರುತ್ತಿದ್ದ. ಕೆಲವು ದಿನಗಳ ಕಾಲ ಯಾವ ಕಳ್ಳತನಕ್ಕೂ ಇಳಿಯದೇ ಮತ್ತೆ ತನ್ನ ಚಾಳಿ ಮುಂದುವರೆಸಿ ಪೊಲೀಸರ ಅತಿಥಿಯಾಗುತ್ತಿದ್ದ. ಈತನ ವಿರುದ್ಧ ಕೆಂಗೇರಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 50 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!