Thursday, June 4, 2026
Homeತಾಜಾ ಸುದ್ದಿನಟ ವಿಜಯ್ ರಾಘವೇಂದ್ರನನ್ನು ನೋಡಿದ ಖುಷಿಯಲ್ಲಿ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ಹಾಕಿದ ಸಿಬ್ಬಂದಿ !

ನಟ ವಿಜಯ್ ರಾಘವೇಂದ್ರನನ್ನು ನೋಡಿದ ಖುಷಿಯಲ್ಲಿ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ಹಾಕಿದ ಸಿಬ್ಬಂದಿ !

- Advertisement -
- Advertisement -

ಶಿವಮೊಗ್ಗ : ನಟ ವಿಜಯ ರಾಘವೇಂದ್ರ ತಮ್ಮ ಕುಟುಂಬದವರ ಜತೆ ಸೇರಿ ಶಿವಮೊಗ್ಗ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳನ್ನು ನೋಡಲು ತೆರಳಿದ್ದರು. ಪ್ರವಾಸ ಮುಗಿಸಿ, ಬೆಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ನಗರದ ಪೆಟ್ರೋಲ್ ಬಂಕ್ ಬಳಿ ಪೆಟ್ರೋಲ್ ಗಾಗಿ ತೆರಳಿದ್ದಾರೆ. ನಟನನ್ನು ನೋಡಿದ ತಕ್ಷಣವೇ ಆ ಭರದಲ್ಲಿ ಕಾರಿಗೆ ಪೆಟ್ರೋಲ್ ಹಾಕುವ ಬದಲಾಗಿ ಡೀಸೆಲ್ ತುಂಬಿಸಿದ್ದಾರೆ. ಈ ಮೂಲಕ ಎಡವಟ್ಟು ಮಾಡಿದ ಘಟನೆ ನಡೆದಿದೆ.

ಜೋಗ ನೋಡಿಕೊಂಡು ಬೆಂಗಳೂರಿಗೆ ಹಿಂತಿರುಗುತ್ತಿದ್ದ ವಿಜಯ್ ರಾಘವೇಂದ್ರ ಮಾರ್ಗ ಮದ್ಯೆ ಪೆಟ್ರೋಲ್ ಬಂಕ್ ಪ್ರವೇಶಿಸಿದ್ದಾರೆ. ವಿಜಯ್ ಅವರ ಕಾರಿಗೆ ಪೆಟ್ರೋಲ್ ತುಂಬಿಸ ಬೇಕಾಗಿದ್ದ ಸಿಬ್ಬಂದಿ ಡೀಸೆಲ್ ಹಾಕಿದ್ದಾರೆ. ನಂತರ ಎಚ್ಚೆತ್ತ ಬಂಕ್ ಸಿಬ್ಬಂದಿ ಹಾಗೂ ಮಾಲೀಕರು ವಿಜಯ್ ರಾಘವೇಂದ್ರ ಬಳಿ ಕ್ಷಮೆ ಯಾಚಿಸಿದರು. ಈ ವೇಳೆ ವಿಜಯ್ ರಾಘವೇಂದ್ರ ಕೂಡಾ ಗರಂ ಆಗಿದ್ದರು ಎಂದು ಗೊತ್ತಾಗಿದೆ.

ಬಳಿಕ ಕಾರನ್ನು ಸರ್ವೀಸ್ ಸಲುವಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ವಿಜಯ್ ರಾಘವೇಂದ್ರ‌ ಹಾಗೂ ಕುಟುಂಬ ಸದಸ್ಯರು ಬಳಿಕ ಮತ್ತೊಂದು ಕಾರಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

https://youtu.be/w2Rq-9nQJu8ಜೋಗ ನೋಡುವ ಯೋಗ??❤️

Posted by Vijay Raghavendra on Sunday, 9 August 2020

- Advertisement -

Latest News

error: Content is protected !!