Friday, June 27, 2025
Homeತಾಜಾ ಸುದ್ದಿಇಷ್ಟು ದಿನ ನಮಗೆಲ್ಲಾ ಕಾಗೆ ಹಾರಿಸಿದ್ರಾ ಡ್ರೋನ್ ಪ್ರತಾಪ್ ?

ಇಷ್ಟು ದಿನ ನಮಗೆಲ್ಲಾ ಕಾಗೆ ಹಾರಿಸಿದ್ರಾ ಡ್ರೋನ್ ಪ್ರತಾಪ್ ?

spot_img
- Advertisement -
- Advertisement -

ಬೆಂಗಳೂರು : ಡ್ರೋನ್ ಪ್ರತಾಪ್ ಇವರು ಅದೆಷ್ಟೋ ಮಕ್ಕಳಿಗೆ, ಯುವಕರಿಗೆ ಇಷ್ಟು ಸ್ಪೂರ್ತಿಯಾಗಿದ್ದರು. ಎಷ್ಟೋ ಹೆತ್ತವರು ಇವರನ್ನೇ ತಮ್ಮ ಮಕ್ಕಳಿಗೆ ಉದಾಹರಣೆಯಾಗಿ ನೀಡುತ್ತಿದ್ದರು.ಆದರೆ ಇದೀಗ ಹರಿಡಾದುತ್ತಿದ್ದ ಸುದ್ದಿಯೊಂದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಡ್ರೋನ್ ಪ್ರತಾಪ್ ಇಷ್ಟು ದಿನ ಸುಳ್ಳು ಹೇಳಿ ನಮ್ಮನ್ನು ನಂಬಿಸಿದ್ರಾ ಅನ್ನುವ ಅನುಮಾನ ಕಾಡುತ್ತದೆ.

ಅಂದ್ಹಾಗೆ  ಹಿಂದೆಯೇ ಡ್ರೋನ್ ಪ್ರತಾಪ್ ಈ ವೇಸ್ಟ್ ನಿಂದ ಡ್ರೋನ್ ತಯಾರಿಸಿದ್ದಾರೆ ಎಂದಾಗಲೇ ಅನೇಕ ಇಂಜಿನಿಯರ್ಸ್ ಗಳು ನಾವಿಲ್ಲಿ ವರ್ಕ್ ಶಾಪ್ ನಲ್ಲಿ ಹಗಲು ರಾತ್ರಿ ಕಷ್ಟ ಪಡ್ತೀವಿ.. ಈ ವೇಸ್ಟ್ ನಿಂದ ಡ್ರೋನ್ ತಯಾರಿಸಲು ಸಾಧ್ಯವಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದರೂ ಸಹ ಯಾರು ನಂಬಿರಲಿಲ್ಲ. ಆದರೆ ಇಷ್ಟು ದಿನ ಯುವ ವಿಜ್ಞಾನಿ ಡ್ರೋನ್ ಪ್ರತಾಪ್ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿ, ಕೆಲ ವರ್ಷಗಳಿಂದ ಮುಖ್ಯಮಂತ್ರಿಗಳಿಂದ ಹಿಡಿದು ವಿವಿಧ ದೊಡ್ಡ ದೊಡ್ಡ ಮಠದ ಸ್ವಾಮೀಜಿಗಳಿಂದಲೂ ಸಹ ಸನ್ಮಾನ ಸ್ವೀಕರಿಸಿದ ಡ್ರೋನ್ ಪ್ರತಾಪ ಹೇಳಿದ್ದೆಲ್ಲಾ ಬರಿ ಸುಳ್ಳು ಎಂದು ರಾಷ್ಟ್ರೀಯ ಮಟ್ಟದ OPIndia ಪ್ರಕಟಿಸಿದೆ..

ಯೆಸ್…ಈ ಬಗ್ಗೆ OPIndia Fact check ಮೂಲಕ ಸತ್ಯದ ಬೆನ್ನಟ್ಟಿ ಹೋದಾಗ ಈತ ನಮ್ಮೆಲ್ಲರನ್ನು  ಮಂಗ ಮಾಡಿರುವುದು ಬಯಲಾಗಿದೆ.  ಡ್ರೋನ್ ಪ್ರತಾಪ್ ಹೇಳುವಂತೆ ಆತ 600 ಡ್ರೋನ್ ಗಳನ್ನು ತಯಾರಿಸಿಯೇ ಇಲ್ಲ‌. ತಯಾರಿಸಿದ್ದರೆ ಆತನ ಬಳಿ ಆ ಎಲ್ಲಾ ಡ್ರೋನ್ ಗಳ ವೀಡಿಯೋ ಕೂಡ ಇಲ್ಲ.. ಜೊತೆಗೆ ಫೋಟೋಗಳು ಸಹ ಇಲ್ಲ.. ಇನ್ನು ಆತ ಹೇಳಿದಂತೆ ಮಿಕ್ಸಿಯಲ್ಲಿನ ಮೋಟಾರ್ ನಿಂದ ಡ್ರೋನ್ ತಯಾರಿಸಲು ಸಾಧ್ಯವೇ ಇಲ್ಲ.. ಹೀಗೆ ಇನ್ನು ಅನೇಕ ವಿಚಾರಗಳನ್ನು OPIndia ವಾಹಿನಿ ಹೇಳಿದೆ.

ಇನ್ನು 87 ದೇಶಗಳು ಆತನಿಗೆ ಕೆಲಸದ ಆಫರ್ ಕೊಟ್ಟಿವೆ ಎಂಬುದು ದೊಡ್ಡ ಸುಳ್ಳು.. ಪ್ರಧಾನಿ ನರೇಂದ್ರ ಮೋದಿ ಅವರು ಡಿಆರ್ ಡಿಓ ದಲ್ಲಿ ಕೆಲಸದ ಆಫರ್ ನೀಡಿದ್ದಾರೆ ಎಂಬುದು ಸುಳ್ಳು.. ಇನ್ನು 2018 ರಲ್ಲಿ ಜರ್ಮನಿಯಲ್ಲಿ ಅಲ್ಬರ್ಟ್ ಐನ್‍ಸ್ಟೈನ್ ಗೋಲ್ಡ್ ಮೆಡಲ್.. ಅಂತರಾಷ್ಟ್ರೀಯ ಡ್ರೋನ್ ಎಕ್ಸ್ಪೋ ದಲ್ಲಿ ಗೋಲ್ಡ್ ಮೆಡಲ್.. CeBit ನಲ್ಲಿ ಮೊದಲ ಬಹುಮಾನ ಹಾಗೂ 2017 ರ ಜಪಾನ್ ನಲ್ಲಿ‌ ನಡೆದ ಅಂತರಾಷ್ಟ್ರೀಯ ರೋಬೋಟಿಕ್ ಎಕ್ಸಿಬ್ಯುಷನ್ ನಲ್ಲಿ ಚಿನ್ನದ ಪದಕ.. ಹೀಗೆ ಹಲವಾರು ಪ್ರಶಸ್ತಿ ಆತನಿಗೆ ಬಂದಿದೆ ಎಂದು ಹೇಳಿಕೊಂಡಿದ್ದ..

 ಆದರೆ ಇದೆಲ್ಲವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಈತನ ಹೆಸರಿನಲ್ಲಿ ಆರೀತಿಯ ಯಾವುದೇ ಅಂತರಾಷ್ಟ್ರೀಯ ಪ್ರಶಸ್ತಿ ದಾಖಲಾಗಿಲ್ಲ.. ಜೊತೆಗೆ ceBit ಅನ್ನೋದು ಒಂದು ಕಂಪ್ಯೂಟರ್ ಎಕ್ಸ್ಪೋ.. ಜರ್ಮನಿಯ ಹ್ಯಾನೋವರ್ ನಲ್ಲಿ‌ ನಡೆದಿದೆ.. ಆದರೆ ಆ ಕಾರ್ಯಕ್ರಮದಲ್ಲಿ ಯಾವುದೇ ಪ್ರತ್ಯೇಕವಾದ ಡ್ರೋನ್ ಎಕ್ಸ್ಪೋ ನಡೆದಿಲ್ಲ.. ಆದ್ದರಿಂದ ಆತ ಅದ್ಯಾವ ಎಕ್ಸ್ಪೋ ದಲ್ಲಿ ಭಾಗವಹಿಸಿ ಅದ್ಯಾವ ಮೆಡಲ್ ಪಡೆದುಕೊಂಡನೋ ತಿಳಿದಿಲ್ಲ..

ಇನ್ನು ಬಹುಮುಖ್ಯವಾಗಿ Cebit ನಲ್ಲಿ ವ್ಯಯಕ್ತಿಕವಾಗಿ ಈತನ ಹೆಸರಲ್ಲಿ ಯಾವುದೇ ಬಹುಮಾನವೂ ಇಲ್ಲ.. ಅಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದಿರುವುದೆಲ್ಲಾ ಮೊಟೋರೋಲಾ, McAcFee ಈ ರೀತಿಯ ಕಂಪನಿಗಳಷ್ಟೇ.. ಯಾವುದೇ ವೈಯಕ್ತಿಕ ಬಹುಮಾನವೂ ಆ ಕಾರ್ಯಕ್ರಮದಲ್ಲಿ ಇರಲಿಲ್ಲ..

ಇದೇ ರೀತಿ ಆತ ಹೇಳಿಕೊಂಡ ಆಲ್ಬರ್ಟ್ ಐನ್ಸ್ಟೈನ್ ಅವಾರ್ಡ್ ಕೂಡ ಇಲ್ಲ.. ಎಲ್ಲವೂ ಶುದ್ಧ ಸುಳ್ಳಾಗಿದೆ.. ದಾಖಲೆಗಳ ಪ್ರಕಾರ ಸತ್ಯ ಸಂಗತಿ ಎಂದರೆ ಅದು ಪ್ರತಾಪ್ ಎಂಬಾತ 2017 ರಲ್ಲಿ ಜಪಾನ್ ನಲ್ಲಿ ನಡೆದ ಅಂತರಾಷ್ಟ್ರೀಯ ರೋಬೋಟ್ ಎಕ್ಸಿಬ್ಯುಷನ್ ನಲ್ಲಿ ಪಾಲ್ಗೊಂಡಿದ್ದ.  ಅದು ಕೂಡ ಆತನ ಕಾಲೇಜಿನ ಉಪನ್ಯಾಸಕರು ಆತನ ಏರ್ ಟಿಕೆಟ್ ಗೆ ಸಹಾಯ ಮಾಡಿದ್ದರು.. ಆ ಎಕ್ಸಿಬುಷ್ಯನ್ ನಲ್ಲಿ ಪ್ರಖ್ಯಾತ ಕಂಪನಿಗಳ ಡ್ರೋನ್ ಗಳನ್ನು ಇಡಲಾಗಿತ್ತು.. ಆದರೆ ಅಲ್ಲಿ ಪ್ರತಾಪ್ ಎಂಬಾತ ಯಾವುದೇ ಡ್ರೋನ್ ಮಾಡಿದ್ದ ದಾಖಲೆಗಳು ಇಲ್ಲ. ಇನ್ನು ಆತನೇ ಹೇಳುವಂತೆ ಆತ ಬಹಳಷ್ಟು ಮೆಡಲ್ ಗಳನ್ನು ಬಹುಮಾನಗಳನ್ನು ಆತನ ಡ್ರೋನ್ ಗಾಗಿ ಪಡೆದಿದ್ದೇನೆ ಎಂದು.. ಆದರೆ ಆತ ಪ್ರಶಸ್ತಿ ಪಡೆಯುತ್ತಿರುವ ಒಂದು ವೀಡಿಯೋ ಸಹ ಇಲ್ಲ.. ಒಂದು ಫೋಟೋ ಸಹ ಇಲ್ಲ.. ಮೆಡಲ್ ಹಿಡಿದು ಎಲ್ಲಿಯೋ ನಿಂತ ಫೋಟೋ ಇದೆಯಷ್ಟೇ.. ಪ್ರಶಸ್ತಿ ಸ್ವೀಕರಿಸುತ್ತಿರುವ ಯಾವ ಫೋಟೋ ಕೂಡ ಇಲ್ಲ..

ಹೀಗೆ ಡ್ರೋನ್ ಪ್ರತಾಪ್ ತಮ್ಮ ಮಾತಿನ ಮೂಲಕವೇ ಎಲ್ಲರನ್ನು ಮಂಗ ಮಾಡಿದ ಸಾಕಷ್ಟು ವಿಚಾರಗಳನ್ನು OPIndia Fact check ಬಯಲು ಮಾಡಿದೆ. ಇದೀಗ ಸೋಶಿಯಲ್ ಮೀಡಿಯೂದಲ್ಲೂ  ಪ್ರತಾಪ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಆದ್ರೆ ಪ್ರತಾಪ್ ಮಾತ್ರ ನನ್ನನ್ನು ಸುಮ್ಮನೆ ಟ್ರೋಲ್ ಮಾಡಲಾಗುತ್ತಿದೆ. ಎಲ್ಲ ಪ್ರಸ್ನೆಗಳಿಗೂ ನಾನು ಪ್ರೆಸ್ ಮೀಟ್ ಮೂಲಕ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!