Friday, June 5, 2026
Homeಕರಾವಳಿಧರ್ಮಸ್ಥಳ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಡೆತ್ ನೋಟಿನಲ್ಲಿ ಇಬ್ಬರ ಹೆಸರು...

ಧರ್ಮಸ್ಥಳ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಡೆತ್ ನೋಟಿನಲ್ಲಿ ಇಬ್ಬರ ಹೆಸರು ಪ್ರಸ್ತಾಪಿಸಿದ ಅಧಿಕಾರಿ

- Advertisement -
- Advertisement -

ಧರ್ಮಸ್ಥಳ: ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆತ್ಮಹತ್ಯೆಗೂ ಮುನ್ನ ಇನ್ನು ಧರ್ಮಸ್ಥಳ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಡೆತ್ ನೋಟ್ ಬರೆದಿದ್ದಾರೆ. ಈ ಡೆತ್ ನೋಟ್ ಮಹಾಎಕ್ಸ್ ಪ್ರೆಸ್ ಗೆ ಲಭ್ಯವಾಗಿದೆ.

ಇನ್ನು ಡೆತ್ ನೋಟಿನಲ್ಲಿ ಜಯರಾಮ್ ಭಂಡಾರಿ ಮತ್ತು ರಘುಚಂದ್ರ ಇವರ ಹೆಸರು ಪ್ರಸ್ತಾಪಿಸಿದ್ದಾರೆ. ಅಲ್ಲದೇ ಮೋಸದಿಂದ ಅಧ್ಯಕ್ಷರ ಮೇಲೆ ಒತ್ತಡ ಹೇರಿದ ಇವರನ್ನು ಕ್ಷಮಿಸುವುದಿಲ್ಲ ಎಂದು  ಬರೆದಿದ್ದಾರೆ. ಜೊತೆಗೆ ನನ್ನ ಮಗಳಿಗೆ ಕ್ಲರ್ಕ್ ಕೆಲಸ ಕೊಡಿಸಿ ಎಂದು ಬರೆದಿದ್ದಾರೆ.  ಇಡೀ ಜೀವನವನ್ನು ಸಂಘಕ್ಕಾಗಿ ಮೀಸಲಿಟ್ಟ ನಾನು ಅಂತ್ಯಕಾಲದಲ್ಲಿ  ಮುಟ್ಟಾಳರಿಂದ ಅಮಾನತಾಗಲು ಬಯಸೋದಿಲ್ಲ ಎಂದು ಬರೆದಿದ್ದಾರೆ.  ಸನ್ಮಿತ್ರ ಸಹೋದ್ಯೋಗಿಗಳಿಗೆ ಶುಭಾಶಯಗಳು. ಶತ್ರುಗಳನ್ನು ಸುಮ್ಮನೆ ಬಿಡೋದಿಲ್ಲ ಎಂದು ಬರೆದಿದ್ದಾರೆ.

- Advertisement -

Latest News

error: Content is protected !!