Wednesday, June 3, 2026
Homeಕರಾವಳಿಧರ್ಮಸ್ಥಳ ಅಸಹಜ ಸಾವುಗಳ ಪ್ರಕರಣ; ಜನವಾದಿ ಮಹಿಳಾ ಸಂಘಟನೆಯಿಂದ ಸಮಗ್ರ ತನಿಖೆಗೆ ಒಕ್ಕೊರಲ ಆಗ್ರಹ

ಧರ್ಮಸ್ಥಳ ಅಸಹಜ ಸಾವುಗಳ ಪ್ರಕರಣ; ಜನವಾದಿ ಮಹಿಳಾ ಸಂಘಟನೆಯಿಂದ ಸಮಗ್ರ ತನಿಖೆಗೆ ಒಕ್ಕೊರಲ ಆಗ್ರಹ

- Advertisement -
- Advertisement -

ಮಂಗಳೂರು: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ವತಿಯಿಂದ ದ.ಕ. ಜಿಲ್ಲಾ ಸಮ್ಮೇಳನ ನಗರದ ಬಲ್ಮಠದ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ನಿರ್ಮಿಸಲಾಗಿದ್ದ ರಾಣಿ ಅಬ್ಬಕ್ಕ ನಗರ, ನಾಡೋಜ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ಧರ್ಮಸ್ಥಳ ಅಸಹಜ ಸಾವುಗಳ ಪ್ರಕರಣದ ಸಮಗ್ರ ತನಿಖೆ ನಡೆಸಲು, ಕೋಮುವಾದ ಸೋಲಿಸಲು ಒಕ್ಕೊರಲ ಆಗ್ರಹಕ್ಕಾಗಿ ಜನವಾದಿ ಮಹಿಳಾ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.

ಸಮ್ಮೇಳನದ ಆರಂಭದಲ್ಲಿ ಜನವಾದಿಯ ಜಿಲ್ಲಾಧ್ಯಕ್ಷೆ ಜಯಂತಿ ಬಿ ಶೆಟ್ಟಿ ಧ್ವಜಾರೋಹಣ ಗೈದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷೆ, ರಂಗ ಕಲಾವಿದೆ ಗೀತಾ ಸುರತ್ಕಲ್ ಸ್ವಾಗತ ಭಾಷಣ ಮಾಡಿದರು. ಸಮ್ಮೇಳನದ ಉದ್ಘಾಟನೆಯನ್ನು ಖ್ಯಾತ ಬರಹಗಾರ್ತಿ, ಪ್ರಾಧ್ಯಾಪಕಿ ಸಬಿತಾ ಬನ್ನಾಡಿ ನಗಾರಿ ಭಾರಿಸುವ ಮೂಲಕ ನೆರವೇರಿಸಿ ದಿಕ್ಸೂಚಿ ಭಾಷಣ ಮಾಡಿದರು. ಹಿರಿಯ ಕವಿಯತ್ರಿ ಚಂದ್ರಕಲಾ ನಂದಾವರ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ ಮಾತನಾಡಿದರು. ಸ್ವಾಗತ ಸಮಿತಿಯ ಅಧ್ಯಕ್ಷರಾದ ಫ್ಲೇವಿ ಕ್ರಾಸ್ತಾ ಅಧ್ಯಕ್ಷೀಯ ಭಾಷಣ ಮಾಡಿದರು. ಜನವಾದಿಯ ರಾಜ್ಯ ಉಪಾಧ್ಯಕ್ಷರಾದ ಕೆ ಎಸ್ ಲಕ್ಷ್ಮಿ, ಜಿಲ್ಲಾ ಕಾರ್ಯದರ್ಶಿ ಭಾರತಿ ಬೋಳಾರ, ಮುಖಂಡರಾದ ಪ್ರಮೀಳಾ ಶಕ್ತಿನಗರ, ಶಮೀಮಾ ಭಾನು ತಣ್ಣೀರುಬಾವಿ, ಈಶ್ವರಿ ಪದ್ಮುಂಜ, ಲತಾ ಲಕ್ಷ್ಮಣ್, ಅಸುಂತಾ ಡಿ ಸೋಜ, ಮಾಧುರಿ ಬೋಳಾರ ಉಪಸ್ಥಿತರಿದ್ದರು.

- Advertisement -

Latest News

error: Content is protected !!