Thursday, June 4, 2026
Homeತಾಜಾ ಸುದ್ದಿಧರ್ಮಸ್ಥಳ: ಬಾಹುಬಲಿ‌ ಬೆಟ್ಟದ ಹಿಂಭಾಗದಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

ಧರ್ಮಸ್ಥಳ: ಬಾಹುಬಲಿ‌ ಬೆಟ್ಟದ ಹಿಂಭಾಗದಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

- Advertisement -
- Advertisement -

ಬೆಳ್ತಂಗಡಿ: ಧರ್ಮಸ್ಥಳದ ಬಾಹುಬಲಿ ಬೆಟ್ಟದ ಹಿಂಭಾಗದ ಕಾಡೊಂದರಲ್ಲಿ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ.

ಧರ್ಮಸ್ಥಳದ ಬಾಹುಬಲಿ ಬೆಟ್ಟದ ಹಿಂಭಾಗದ ಕಾಡಿನಲ್ಲಿ ಕಳೆದ ಕೆಲವು ದಿನಗಳಿಂದ ವಾಸನೆ ಬರುತ್ತಿತ್ತು. ಇದೀಗ ವಾಸನೆ ಜಾಸ್ತಿ ಆದ ಕಾರಣ ಯಾತ್ರಾರ್ಥಿಗಳು ಶ್ರೀಕ್ಷೇತ್ರದ ಕಚೇರಿಗೆ ದೂರು ನೀಡಿದ್ದರು. ಕ್ಷೇತ್ರದ ಮಾಹಿತಿ ಕಚೇರಿಯ ಮೇಲ್ವಿಚಾರಕರು ಪೊಲೀಸರಿಗೆ ವಿಷಯ ತಿಳಿಸಿದ್ದರು.

ಇವತ್ತು ಬೆಳಿಗ್ಗೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಸುಮಾರು 60 ವರ್ಷದ ಅಪರಿಚಿತ ಹೆಂಗಸಿನ ಮೃತದೇಹವೊಂದು ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!