Friday, May 3, 2024
Homeಕರಾವಳಿಬೆಳ್ತಂಗಡಿ : ಎರಡು ವರ್ಷಗಳಿಂದ ಗಂಡನಿಂದ ಪತ್ನಿಗೆ ಪ್ರತಿನಿತ್ಯ ಕಿರುಕುಳ: ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ತಂಡದಿಂದ...

ಬೆಳ್ತಂಗಡಿ : ಎರಡು ವರ್ಷಗಳಿಂದ ಗಂಡನಿಂದ ಪತ್ನಿಗೆ ಪ್ರತಿನಿತ್ಯ ಕಿರುಕುಳ: ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ತಂಡದಿಂದ ಒಂದೇ ದಿನದಲ್ಲಿ ಸಮಸ್ಯೆಗೆ ಪರಿಹಾರ

spot_img
- Advertisement -
- Advertisement -

ಬೆಳ್ತಂಗಡಿ : ಈ ಗ್ರಾಮ ತಾಲೂಕಿನ ತುತ್ತತುದಿಯಲ್ಲಿರುವುದು. ಈ ಗ್ರಾಮಕ್ಕೆ ಹೋಗಬೇಕಾದರೆ ಸರಿಸುಮಾರು ಬೆಳ್ತಂಗಡಿಯಿಂದ 45 ಕಿ.ಮೀ ಇದೆ.  ಸರಿಯಾದ ಮೊಬೈಲ್ ನೆಟ್ ವರ್ಕ್ ಕೂಡ ಇಲ್ಲದೆ ಎಲ್ಲೆಂದರಲ್ಲಿಯೂ ವಂಚಿತರಾಗಿದ್ದರು. ಕೆಲ ವರ್ಷಗಳಿಂದ ಅಲ್ಲಲ್ಲಿ ರಸ್ತೆ ಸಂಪರ್ಕ ಹಾಗೂ ವಿದ್ಯುತ್ ಸಂಪರ್ಕ ಸಿಕ್ಕಿ ಈ ಪ್ರದೇಶದ ಜನರ ಬಾಳು ಸ್ವಲ್ಪ ಮಟ್ಟಿಗೆ ಬೆಳಕಾಗಿದೆ‌. ಈ ಪ್ರದೇಶದ ಒಂದು ಮನೆಯಲ್ಲಿ ಸುಮಾರು ಎರಡು ವರ್ಷಗಳಿಂದ ಗಂಡನ ಕಿರುಕುಳ ಪತ್ನಿಗೆ ತಪ್ಪಿದ್ದಲ್ಲ. ಪ್ರತಿನಿತ್ಯ ಪತಿಯ ಹಿಂಸೆಯಿಂದ ಪತ್ನಿ ಧರ್ಮಸ್ಥಳ ಪೊಲೀಸ್ ಠಾಣೆಯ ಮೆಟ್ಟಿಲೇರಿ ಪತಿಯನ್ನು ಸರಿಮಾಡಲು ಬೇಡಿಕೊಳ್ಳುತ್ತಿದ್ದ ಪತ್ನಿ. ಇತ್ತೀಚೆಗೆ ದೂರು ಅರ್ಜಿ ಪಡೆದ ಧರ್ಮಸ್ಥಳ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್.ಡಿ ತಮ್ಮ ತಂಡದೊಂದಿಗೆ ಇಲಾಖೆಯ ಜೀಪಿನಲ್ಲಿ ದೂರದೂರಿಗೆ ಪ್ರಯಾಣ ಮಾಡಿ ಒಂದು ದಿನ ಮನೆಯಲ್ಲಿ ಕುಳಿತು ಸಂಧಾನ ಮಾಡಿ ಕೊನೆಗೂ ದಂಪತಿಗೆ ಮರುಜೀವ ನೀಡಿದ್ದಾರೆ. ಕೊನೆಗೆ ಪೊಲೀಸ್ ತಂಡ ಮಾಡಿದ ಸಹಾಯದಿಂದ ದಂಪತಿ ಕುಟುಂಬ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ‌.

ಪ್ರಕರಣದ ವಿವರ: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಬಾಂಜಾರುಮನೆ ಎಂಬಲ್ಲಿ ಒಬ್ಬಂಟಿಯಾಗಿ ಜೀವನ ಮಾಡುತ್ತಿದ್ದ ಸುಶೀಲ (46) ಎಂಬಕೆಗೆ ಸುಮಾರು 5 ಎಕರೆ ಜಾಗ ಇದೆ. ಇದರಲ್ಲಿ 2.50 ಎಕರೆಯಷ್ಟು ಕೃಷಿ ಮಾಡುತ್ತಿದ್ದು. ಕಳೆದ ಎರಡು ವರ್ಷದ ಹಿಂದೆ ಹಾಸನ ಜಿಲ್ಲೆಯ ಅರಕಲುಗೂಡು ನಿವಾಸಿ ರಂಗಣ್ಣ (48) ಎಂಬಾತನ ಜೊತೆ ವಿವಾಹ ಮಾಡಿಕೊಳ್ಳಲಾಗಿತ್ತು. ಗಂಡ ರಂಗಣ್ಣ ಪತ್ನಿ ಮನೆಯಲ್ಲಿದ್ದುಕೊಂಡು ಕೃಷಿ ಮಾಡಿಕೊಂಡು ಜೀವನ ಆರಂಭಿಸಿದ್ದರು.‌ಮದುವೆಯಾಗಿ ಒಂದು ತಿಂಗಳು ಚೆನ್ನಾಗಿ ಜೀವನ ನಡೆಸುತ್ತಿದ್ದ ದಂಪತಿಗಳು. ನಂತರ ಪತ್ನಿಗೆ ಪ್ರತಿನಿತ್ಯ ಕಿರುಕುಳ ನೀಡಲು ಆರಂಭಿಸಿದ್ದ. ಗಂಡನ ಕಿರುಕುಳವನ್ನು ಎರಡು ವರ್ಷದಿಂದ ಸಹಿಸಿಕೊಂಡು ಬಂದಿದ್ದು.‌ಕಳೆದ ಕೆಲ ದಿನಗಳಿಂದ ಗಂಡನ ಕಿರುಕುಳ ಜಾಸ್ತಿಯಾಗಿತ್ತು. ಇದರಿಂದ ನೊಂದ ಪತ್ನಿ ಸುಶೀಲ ನೇರ ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದು ತಮ್ಮ ಕಷ್ಟಗಳನ್ನು ಹೇಳಿಕೊಂಡು ಗಂಡನನ್ನು ಸರಿಪಡಿಸಲು ಬೇಡಿಕೊಳ್ಳುತ್ತಿದ್ದಳು. ಜೂನ್ 9 ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ಗಂಡ ಪ್ರತಿನಿತ್ಯ ವಿನಾಃ ಕಾರಣ ಕಿರುಕುಳ ನೀಡುತ್ತಿದ್ದಾನೆ ಆತನನ್ನು ಠಾಣೆಗೆ ಕರೆಸಿ ಸೂಕ್ತ ತಿಳುವಳಿಕೆ ನೀಡಿಬೇಕೆಂದು ಕೋರಿ ಲಿಖಿತ ದೂರು ಅರ್ಜಿ ನೀಡಿದ್ದ ಸುಶೀಲರಿಗೆ ಇಂದು ಪೊಲೀಸರು ಮಾಡಿದ ಸಂಧಾನದಿಂದ ದಂಪತಿ ಮರುಜೀವ ಬಂದಂತಾಗಿದೆ.

ಪೊಲೀಸರ ಸಂಧಾನ ಕಾರ್ಯ: ದೂರು ಅರ್ಜಿ ಬಂದಾಗ ಧರ್ಮಸ್ಥಳ ಸಬ್ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಅವರು ರಜೆಯಲ್ಲಿದ್ದರು ಇತ್ತಿಚೆಗೆ ಕರ್ತವ್ಯಕ್ಕೆ ಬಂದು ಠಾಣೆಗೆ ಬಂದ ದೂರುಗಳ ಬಗ್ಗೆ ಪರಿಶೀಲನೆ ನಡೆಸಿದಾಗ ಬಾಂಜಾರುಮಲೆ ನಿವಾಸಿ ಸುಶೀಲ ಪ್ರಕರಣದ ಬಗ್ಗೆ ಗಮನಹರಿಸಿದ್ದು. ಬಾಂಜಾರುಮಲೆಗೆ ಹೋಗಲು ಸಮಯ ನಿಗದಿ ಮಾಡಿದ್ದರು ಅದರಂತೆ ಜೂನ್ 14 ಕ್ಕೆ (ಇಂದು) ಸಬ್ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್. ಡಿ ಮತ್ತು ಸಿಬ್ಬಂದಿಯಾದ ಪ್ರಶಾಂತ್ ಕುಮಾರ್, ಸತೀಶ್ ನಾಯ್ಕ್ ಚಾಲಕ ಲೋಕೇಶ್ ಇಲಾಖಾ ಜೀಪಿನಲ್ಲಿ ಬಾಂಜಾರುಮಲೆಗೆ ಬೆಳಗ್ಗೆ ಹೋಗಿದ್ದು. ಈ ವೇಳೆ ದಂಪತಿಗಳನ್ನು ಕುರಿಸಿ ಸಮಸ್ಯೆಗಳನ್ನು ವಿಚಾರಿಸಿದ್ದಾರೆ. ಆಗ ಗಂಡನ ಕುಡಿದು ಗಲಾಟೆ ಮಾಡಿ ಕಿರುಕುಳ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಪೊಲೀಸರು ಪತಿ ರಂಗಣ್ಣನನ್ನು ಸರಿಯಾಗಿ ವಿಚಾರಿಸಿದ್ದಾರೆ. ಕುಡಿದ ಮತ್ತಿನಲ್ಲಿ ಎಲ್ಲಾ ಅನಾಹುತ ನಡೆಯುತ್ತಿದೆ ಸರ್ ಅಂತ ಹೇಳಿದ್ದಾನೆ. ಪೊಲೀಸ್ ಸ್ಟೈಲ್ ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಧ್ಯಾಹ್ನ ಊಟವನ್ನು ಮನೆಯಲ್ಲೇ ಮಾಡಿ ವಾಪಸ್ ದಂಪತಿಯನ್ನು ಕೂರಿಸಿ ಸಂಧಾನ ಮುಂದಯವರಿಸಿದ್ದರು. ಸಂಜೆಯಾಗುತ್ತಿದ್ದಂತೆ ಗಂಡ ರಂಗಣ್ಣನಿಗೆ ತನ್ನ ತಪ್ಪಿನ ಅರಿವಾಗಿದ್ದು ಪೊಲೀಸರ ಮುಂದೆಯೇ ಕಣ್ಣೀರು ಹಾಕಿಕೊಂಡು ಪತ್ನಿ ಸುಶೀಲ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದು. ನಾನು ಇನ್ನೂ ಕುಡಿಯುವುದನ್ನು ಬಿಡುತ್ತೇನೆ.ಹೆಂಡತಿಯನ್ನು ಇನ್ನೂ ಮುಂದೆ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಇನ್ನೂ ಮುಂದಕ್ಕೆ ಕುಡಿದು ಗಲಾಟೆ ಮಾಡಿದರೆ ನನ್ನ ಮೇಲೆ ಕೇಸ್ ಮಾಡಿ ಜೈಲಿಗೆ ಹಾಕಿ ಸರ್ ಎಂದೂ ಪೊಲೀಸರೊಂದಿಗೆ ಅಂಗಲಾಚಿಕೊಂಡಿದ್ದಾನೆ. ಸಂಧಾನ ಮಾಡಿಸಿ ಉತ್ತಮ ಜೀವನಕ್ಕೆ ದಾರಿತೋರಿಸಿದ ಖುಷಿಯಲ್ಲಿ ದಂಪತಿಗಳು ಧರ್ಮಸ್ಥಳ ಪೊಲೀಸರಿಗೆ ಅಭಿನಂದಿಸಿದ್ದಾರೆ.ಈ ಎಲ್ಲಾ ಒಳ್ಳೆಯ ಘಟನಾವಳಿಗಳಿಗೆ ಅಕ್ಕಪಕ್ಕದ ನಿವಾಸಿಗಳು ಕೂಡ ಸಾಕ್ಷಿಯಾಗಿದ್ದರು.

ಧರ್ಮಸ್ಥಳ ಪೊಲೀಸರ ಸಮಾಜಮುಖಿ ಕಾರ್ಯ: ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಮತ್ತು ತಂಡದವರು ಈ ಹಿಂದೆ ಕೂಡ ಹಲವು ಸಮಾಜಮುಖಿ ಕೆಲಸ ಮಾಡಿದ್ದು. ಅನೇಕ ಪತ್ತೆಯಾಗದ ಗಂಭೀರ ಪ್ರಕರಣಗಳನ್ನು ಪತ್ತೆ ಹಚ್ಚಿ ವಸ್ತುಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ಕಾನೂನು ಮುಂದೆ ನಿಲ್ಲಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏನೂ ಪ್ರಕರಣ ನಡೆದರೂ ತಕ್ಷಣ ಧರ್ಮಸ್ಥಳ ಪೊಲೀಸ್ ಠಾಣೆಯ ಪ್ರತಿಯೊಬ್ಬ ಸಿಬ್ಬಂದಿ ಕೂಡ ಅದರ ಬೆನ್ನುಬಿದ್ದು ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗುತ್ತಿದ್ದು. ಇಲ್ಲಿನ ನಿವಾಸಿಗಳ ನೆಮ್ಮದಿಗೆ ಕಾರಣವಾಗುತ್ತಿರುವ ಪೊಲೀಸರು ಇದೀಗ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ.

- Advertisement -
spot_img

Latest News

error: Content is protected !!