Friday, April 19, 2024
Homeಉದ್ಯಮಧರ್ಮಸ್ಥಳ: NEXON ಎಲೆಕ್ಟ್ರಿಕಲ್ ಕಾರನ್ನು ಬಿಡುಗಡೆಗೊಳಿಸಿದ ಡಾ.ಡಿ ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ: NEXON ಎಲೆಕ್ಟ್ರಿಕಲ್ ಕಾರನ್ನು ಬಿಡುಗಡೆಗೊಳಿಸಿದ ಡಾ.ಡಿ ವೀರೇಂದ್ರ ಹೆಗ್ಗಡೆ

spot_img
- Advertisement -
- Advertisement -

ಧರ್ಮಸ್ಥಳ: ಭಾರತದಲ್ಲಿ ಅತ್ಯಂತ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಟಾಟಾ ನೆಕ್ಸಾನ್ ನ ನೂತನ ಅವತರಣಿಕೆಯಾದ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.

ಹಾಗೆಯೆ ಅತಿ ಅಪರೂಪದ ಕಾರುಗಳ ಸಂಗ್ರಹ ಮಾಡಿರುವ ಮತ್ತು ಕಾರುಗಳ ಬಗ್ಗೆ ಅತಿಯಾದ ಪ್ರೀತಿ ಇರುವ ಧರ್ಮಾಧಿಕಾರಿಗಳು ನೆಕ್ಸಾನ್ ಕಾರಿನಲ್ಲಿ ಕೂತು ಕಾರಿನa ವೈಶಿಷ್ಟತೆಯ ಬಗ್ಗೆ ಮಾಹಿತಿ ಪಡೆದರು

ಈ ಸಂಧರ್ಭದಲ್ಲಿ ಮಂಗಳೂರಿನ ಆಟೋ ಮ್ಯಾಟ್ರಿಕ್ಸ್ ನ MD ಡಿ.ರಾಜೇಂದ್ರ ಕುಮಾರ್, CEO ಪ್ರದೀಪ್ ಮಯ್ಯ ಉಪಸ್ಥಿತರಿದ್ದರು.

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ 13.99 ಲಕ್ಷ ರೂಪಾಯಿಯಿಂದ ಆರಂಭವಾಗಲಿದೆ. ಈ ಮೂಲಕ ಭಾರತದ ಕಡಿಮೆ ಬೆಲೆ SUV ಎಲೆಕ್ಟ್ರಿಕ್ ಕಾರು ಅನ್ನೋ ಹಿರಿಮೆಗೆ ಪಾತ್ರವಾಗಿದೆ. ಭಾರತದಲ್ಲಿ ಮೊದಲ ಬಿಡುಗಡೆಯಾದ ಹ್ಯುಂಡೋ ಕೋನಾ ಎಲೆಕ್ಟ್ರಿಕ್ SUV ಕಾರಿನ ಬೆಲೆ 25 ಲಕ್ಷ ರೂಪಾಯಿ, ಇನ್ನು ಇತ್ತೀಚೆಗೆ ಬಿಡುಗಡೆಯಾದ ಎಂಜಿ ZS ಕಾರಿನ ಬೆಲೆ 20 ಲಕ್ಷ ರೂಪಾಯಿಂದ ಆರಂಭವಾಗುತ್ತಿದೆ. ಈ ಎರಡು ಕಾರಿಗೆ ನೆಕ್ಸಾನ್ ಪೈಪೋಟಿ ನೀಡಲಿದೆ.

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ (ಎಕ್ಸ್ ಶೋ ರೂಂ)
ಟಾಟಾ ನೆಕ್ಸಾನ್ EV XM – 13.99 ಲಕ್ಷ ರೂಪಾಯಿ
ಟಾಟಾ ನೆಕ್ಸಾನ್ EV XZ+ – 4.99 ಲಕ್ಷ ರೂಪಾಯಿ
ಟಾಟಾ ನೆಕ್ಸಾನ್ EV XZ+ Lux – 15.99 ಲಕ್ಷ ರೂಪಾಯಿ

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 312 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ.

- Advertisement -
spot_img

Latest News

error: Content is protected !!