Sunday, June 7, 2026
Homeಕರಾವಳಿಕಾರು ಮಾರಾಟ ಪ್ರಕರಣ ; ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು ಹಿಂಪಡೆದ ಡಿಜಿಪಿ!

ಕಾರು ಮಾರಾಟ ಪ್ರಕರಣ ; ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು ಹಿಂಪಡೆದ ಡಿಜಿಪಿ!

- Advertisement -
- Advertisement -

ಮಂಗಳೂರು: ಕಾರು ಮಾರಾಟ ಪ್ರಕರಣದಲ್ಲಿ ನಗರದ ಸಿಸಿಬಿ ಪೊಲೀಸರ ಮೇಲೆ ಗಂಭೀರ ಆರೋಪಕ್ಕೀಡಾಗಿ ಆಮಾನತಾಗಿದ್ದ ಆಗಿನ ಸಿಸಿಬಿ ಎಸ್‌ಐ ಕಬ್ಬಾಳರಾಜ್ ಮತ್ತು ಸಿಇಎನ್ ಪಾಂಡೇಶ್ವರ ಠಾಣೆಯಲ್ಲಿ ಇನ್ಸೆಪೆಕ್ಟರ್ ಆಗಿದ್ದ ರಾಮಕೃಷ್ಣ ಅವರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ.

ಹಣ ಡಬ್ಬಿಂಗ್ ಪ್ರಕರಣದಲ್ಲಿ ಬಂಧಿತರಾಗಿದ್ದ ಕೇರಳ ಮೂಲದ ಆರೋಪಿಗಳನ್ನು ಬಿಡುಗಡೆ ಮಾಡಲು ಅವರಲ್ಲಿದ್ದ ಐಷಾರಾಮಿ ಕಾರನ್ನು ಪಡೆದು ಮಾರಾಟ ಮಾಡಿದ್ದಾರೆಂದು ಆರೋಪ 2020ರ ನವೆಂಬರ್ ತಿಂಗಳಲ್ಲಿ ಕೇಳಿಬಂದಿತ್ತು.

ಈ ವಿಚಾರ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗುತ್ತಿದ್ದಂತೆ, ಮಂಗಳೂರಿನ ಹಲವರು ಸಿಸಿಬಿ ಪೊಲೀಸರ ವಿರುದ್ಧ ಆರೋಪ ಹೊರಿಸಿ ಡಿಜಿಪಿಗೆ ದೂರು ನೀಡಿದ್ದರು. ಆಗ ಮಂಗಳೂರಿನಲ್ಲಿ ಕಮಿಷನರ್ ಆಗಿದ್ದ ವಿಕಾಸ್ ಕುಮಾರ್ ವಿರುದ್ಧವೂ ಆರೋಪ ಕೇಳಿಬಂದಿತ್ತು.ಜಾಗ್ವಾರ್ ಮತ್ತು ಬಿಎಂಡಬ್ಲ್ಯು ಕಾರನ್ನು ಬೆಂಗಳೂರಿನ ವ್ಯಕ್ತಿಗೆ ಮಾರಾಟ ಮಾಡಿದ್ದರು ಎಂದುಹ್ ಹೇಳಲಾಗಿತ್ತು.

ಇದರ ಬೆನ್ನಲ್ಲೇ ಡಿಜಿಪಿ ಪ್ರವೀಣ್ ಸೂದ್, ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಕ್ಕೀಡಾಗಿದ್ದ ಕಬ್ಬಾಳರಾಜ್ ಮತ್ತು ರಾಮಕೃಷ್ಣ ಹಾಗೂ ಇನ್ನಿಬ್ಬರು ಪೊಲೀಸ್ ಸಿಬಂದಿಯನ್ನು ಕರ್ತವ್ಯದಿಂದ ಅಮಾನತು ಮಾಡಿ, ಒಟ್ಟು ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ಆದೇಶ ಮಾಡಿದ್ದರು. ಫೆಬ್ರವರಿ ಕೊನೆಯ ವಾರದಲ್ಲಿ ಇವರು ಸಸ್ಪೆಂಡ್ ಆಗಿದ್ದರು. ಆದರೆ, ಯಾವುದೇ ಆರೋಪ ಇಲಾಖಾ ತನಿಖೆಯ ಕಾರಣಕ್ಕೆ ಅಮಾನತುಗೊಂಡರೆ, ಅಂತಹ ಅಧಿಕಾರಿಗಳು ಆರು ತಿಂಗಳ ವರೆಗೆ ಮಾತ್ರ ಅಮಾನತಿನಲ್ಲಿ ಇರುತ್ತಾರೆ. ಆನಂತರ ಸಹಜವಾಗೇ ಅಮಾನತು ಅವಧಿ ಮುಗಿದು ಅಮಾನತುಗೊಂಡು ಅಕ್ಟೋಬರ್ ತಿಂಗಳಿಗೆ ಎಂಟು ತಿಂಗಳಾಗುತ್ತದೆ. ಅದರಂತೆ, ಡಿಜಿಪಿ ಪ್ರವೀಣ್ ಸೂದ್ ಅವರನ್ನು ಮತ್ತೆ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದಾರೆಂದು ತಿಳಿದುಬಂದಿದೆ.

ನಿವೃತ್ತಿ ಅಂಚಿನಲ್ಲಿರುವ ರಾಮಕೃಷ್ಣ ಅವರನ್ನು ಮಂಗಳೂರಿನ ಡಿಸಿಆರ್ ಇ (ನಾಗರಿಕ ಹಕ್ಕು ನಿರ್ದೇಶನಾಲಯ) ಯೂನಿಟ್‌ಗೆ ಹಾಗೂ ಕಬ್ಬಾಳರಾಜ್‌ರನ್ನು ರಾಜ್ಯ ಗುಪ್ತಚರ ಇಲಾಖೆಗೆ ವರ್ಗಾಯಿಸಿದ್ದು, ಬೆಂಗಳೂರಿನಲ್ಲಿ ಕರ್ತವ್ಯಕ್ಕೆ ನಿಯೋಜನೆ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!