Thursday, June 25, 2026
Homeಕರಾವಳಿಮಂಗಳೂರು: ಸೌದಿಯಲ್ಲಿ ರಸ್ತೆ ಅಪಘಾತ- ದೇರೆಬೈಲ್ ಮೂಲದ ವ್ಯಕ್ತಿ ಸಾವು

ಮಂಗಳೂರು: ಸೌದಿಯಲ್ಲಿ ರಸ್ತೆ ಅಪಘಾತ- ದೇರೆಬೈಲ್ ಮೂಲದ ವ್ಯಕ್ತಿ ಸಾವು

- Advertisement -
- Advertisement -

ಮಂಗಳೂರು: ಸೌದಿಯ ರಿಯಾದ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಂಗಳೂರಿನ ದೇರೆಬೈಲ್ ನಿವಾಸಿ ಸ್ಟೇನಿ ಸಿಕ್ಕೇರಾ (57) ಸಾವನ್ನಪ್ಪಿದ್ದಾರೆ.

ರಿಯಾದ್‌ನಲ್ಲಿ ಕಳೆದ ಕೆಲವು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಜನವರಿ 17ರಂದು ಮೃತಪಟ್ಟಿದ್ದಾರೆ.

ಸ್ಟೇನಿ ಸಿಕ್ಕೇರಾ ಅವರು ದೇರೆಬೈಲ್ ಬಳಿಯ ನೆಕ್ಕಿಲಗುಡ್ಡೆಯ ರಾಯಲ್ ಫ್ರೆಂಡ್ಸ್ ಕ್ಲಬ್‌ನ ಸ್ಥಾಪಕ ಸದಸ್ಯರಾಗಿದ್ದಾರೆ. ಇವರು ಕ್ರೀಡಾಪಟು ಆಗಿದ್ದು ಉತ್ತಮ ವಾಲಿಬಾಲ್ ಆಟಗಾರರಾಗಿದ್ದರು, ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

- Advertisement -

Latest News

error: Content is protected !!