Thursday, June 4, 2026
Homeಕರಾವಳಿಉಡುಪಿನಕಲಿ ಕಾರ್ಮಿಕ ಕಾರ್ಡ್‌ ಗಳನ್ನು ಪತ್ತೆಹಚ್ಚಲು ಮುಂದಾದ ಇಲಾಖೆ; ಜಿಲ್ಲೆಯಲ್ಲಿ 1,286 ನಕಲಿ ಕಾರ್ಡ್‌ ಗಳ...

ನಕಲಿ ಕಾರ್ಮಿಕ ಕಾರ್ಡ್‌ ಗಳನ್ನು ಪತ್ತೆಹಚ್ಚಲು ಮುಂದಾದ ಇಲಾಖೆ; ಜಿಲ್ಲೆಯಲ್ಲಿ 1,286 ನಕಲಿ ಕಾರ್ಡ್‌ ಗಳ ಅಮಾನತು

- Advertisement -
- Advertisement -

ಉಡುಪಿ: ರಾಜ್ಯದಲ್ಲಿ ನಕಲಿ ಕಾರ್ಮಿಕ ಕಾರ್ಡ್‌ಗಳನ್ನು ಸೃಷ್ಟಿಸಿ ಸರಕಾರ ಹಾಗೂ ಕಾರ್ಮಿಕ ಇಲಾಖೆಯಿಂದ ವಿವಿಧ ಫಲಾನುಭವವನ್ನು ಪಡೆಯುತ್ತಿರುವವರ ಮೇಲೆ ಇದೀಗ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುತ್ತಿದೆ.

ಈವರೆಗೂ ಉಭಯ ಜಿಲ್ಲೆಗಳಲ್ಲಿ 1,286 ನಕಲಿ ಕಾರ್ಡ್‌ ಗಳನ್ನು ಅಮಾನತುಗೊಳಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಅತೀ ಹೆಚ್ಚು 1,69,180 ಕಾರ್ಡ್‌ಗಳು ಪತ್ತೆಯಾಗಿದೆ. ಇನ್ನು ಕಾರ್ಮಿಕರಲ್ಲದವರು ನಕಲಿ ಕಾರ್ಡ್‌ಗಳನ್ನು ಮಾಡಿಸಿ ಸರಕಾರದ ಯೋಜನೆಗಳ ಲಾಭ ಪಡೆಯುತ್ತಿರುವ ಬಗ್ಗೆ ಇಲಾಖೆಗೆ ಈಗಾಗಲೇ ದೂರುಗಳು ಬಂದಿದ್ದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ನಕಲಿ ಕಾರ್ಮಿಕ ಕಾರ್ಡ್‌ ಗಳನ್ನು ಪತ್ತೆಹಚ್ಚಲು ಇಲಾಖೆ ಮುಂದಾಗಿದೆ.

ಈಗಾಗಲೇ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 38.42 ಲಕ್ಷ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿಯಲ್ಲಿ ಕಾರ್ಮಿಕ ಇಲಾಖೆಯು 2,46,951 ಕಾರ್ಡ್‌ಗಳನ್ನು ನಕಲಿ ಎಂದು ಪಟ್ಟಿ ಮಾಡಿ ಅಮಾನತುಗೊಳಿಸಿದೆ ಎನ್ನಲಾಗಿದೆ.

- Advertisement -

Latest News

error: Content is protected !!