Monday, June 8, 2026
Homeಕರಾವಳಿಮಂಗಳೂರುಬೆಳ್ತಂಗಡಿ;  ಕನ್ಯಾಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಭತ್ತ ನಾಟಿ ಮತ್ತು ಕೃಷಿಯ ಪ್ರಾತ್ಯಕ್ಷಿಕೆ

ಬೆಳ್ತಂಗಡಿ;  ಕನ್ಯಾಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಭತ್ತ ನಾಟಿ ಮತ್ತು ಕೃಷಿಯ ಪ್ರಾತ್ಯಕ್ಷಿಕೆ

- Advertisement -
- Advertisement -

ಬೆಳ್ತಂಗಡಿ;  ಕನ್ಯಾಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಭತ್ತ ನಾಟಿ ಮತ್ತು ಕೃಷಿಯ ಪ್ರಾತ್ಯಕ್ಷಿಕೆ ಗಂಗ್ಯೆತ್ಯಾರು ಗದ್ದೆಯಲ್ಲಿ ನಡೆಯಿತು.

ಕನ್ಯಾಡಿ ಗಂಗೆತ್ಯಾರಿನ ಪಡ್ವೆಟ್ನಾಯರ ಕುಟುಂಬದ ಗದ್ದೆಯಲ್ಲಿ ಶಾಲೆಯ ಏಳನೇ ಹಾಗೂ ಏoಟನೇ ತರಗತಿ ಮಕ್ಕಳಿಗೆ  ಭತ್ತದ ನಾಟಿ ಪ್ರಾತ್ಯಕ್ಷಿಕೆಯು ಮುಖ್ಯ್ಯೊಪಾಧ್ಯಾಯರಾದ ಮರಿಯಪ್ಪ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನಂದ ಭಟ್ ಕೆ ಇವರ ನೇತೃತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ನಡೆಯಿತು. ಈ ಸಂದರ್ಭದಲ್ಲಿ ಮಾಧವ ಪಡ್ವೆಟ್ನಾಯರ ಶಾಂತಾ ಅವರು ಮಕ್ಕಳಿಗೆ ಹಲವು ಮಾಹಿತಿಗಳನ್ನು ನೀಡಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕ ವೃಂದ ಸಹಕರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಪಡ್ವೇಟ್ನಾಯರ  ಮನೆಯವರು ನೀಡಿದ ಭೋಜನ ವ್ಯವಸ್ಥೆಯನ್ನು ನೀಡಿ ಸಹಕರಿಸಿದರು.

- Advertisement -

Latest News

error: Content is protected !!